ತಾಲೂಕು ಕೇಂದ್ರಕ್ಕೆ ಆಗ್ರಹಿಸಿ ಕೆಜಿಎಫ್ ಬಂದ್
ಕೆಜಿಎಫ್: ಕ್ಷೇತ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಇದೇ ತಿಂಗಳು ಫೆ.7 ರಂದು ಶುಕ್ರವಾರ ಕೆಜಿಎಫ್ ಬಂದ್ಗೆ ಕರೆ ನೀಡಲು ನಗರದ ಕನ್ನಡ ಸಂಘದ ಆವರಣದಲ್ಲಿ ನವಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎನ್. ರಾಜಗೋಪಾಲಗೌಡ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪೂರ್ವಬಾವಿ ಸಭೆಯಲ್ಲಿ ತೀರ್ಮಾನಿಸಿದರು. ಕೆಜಿಎಫ್ನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಫೆ.7 ರಂದು ಕೆಜಿಎಫ್ ಬಂದ್ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ಈಗಾಗಲೇ ತ್ವರಿತ ನ್ಯಾಯಾಲಯ, ಪೊಲೀಸ್ ವರಿಷ್ಠಾಧಿಕಾರಿ, ಬ್ಯಾಂಕ್ಗಳು, ಅಗ್ನಿಶಾಮಕದಳ ಕಚೇರಿ, ಎಲ್ಐಸಿ, ಬಿಇಎಂಎಲ್ ಕಾರ್ಖಾನೆ, ಅಂಚೆ ಕಚೇರಿ, ದೂರವಾಣಿ ಕೇಂದ್ರ, ನಾಡ ಕಚೇರಿ ಹೊಂದಿದ್ದು ತಾಲೂಕು ಕೇಂದ್ರಕ್ಕೆ ಎಲ್ಲಾ ರೀತಿಯ ಮಾನ್ಯತೆ ಪಡೆದಿದೆ ಎಂದು ಹೇಳಿದರು.