ಬೇಂದ್ರೆಯವರ ಹುಟ್ಟು ಹಬ್ಬ ಆಚರಣೆ
ಟೇಕಲ್: ದೊಡ್ಡನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವರಕವಿ ಬೇಂದ್ರೆಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಎಂ. ವೆಂಕಟೇಶ್ ಮಾತನಾಡಿ, ರಾಷ್ಟ್ರದಲ್ಲಿ ಖ್ಯಾತಿಗಳಿಸಿ, ಜ್ಞಾನಪೀಠ ವಿಜೇತರಾದ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರ ಸಾಹಿತ್ಯ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು. ಈ ಸಂದರ್ಭದಲ್ಲಿ ಕವಿಯ ಹಾಡುಗಳನ್ನು ಶಿಕ್ಷಕ ಜಿ.ಟಿ. ರಾಮಚಂದ್ರಪ್ಪ ಹಾಡಿದರು. ಕವನ ವಾಚನ ಮಂಡಿಸಲಾಯಿತು. ಕಾರ್ತಿಕ್, ಅಮರಾವತಿ, ಸುಮಶ್ರೀ, ಲತಾ ಮತ್ತು ವಿದ್ಯಾರ್ಥಿಗಳು ಇದ್ದರು.