ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಯಶಸ್ವಿ ಲೋಕ ಅದಾಲತ್ ಕಾರ್ಯಕ್ರಮ

Rashmi Kasaragodu
Updated On : 2 Feb 2014, 1:21 am

ಟೇಕಲ್: ಟೇಕಲ್ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮ 10 ಕಂದಾಯ ಸ್ಥಳಗಳಲ್ಲಿ ನಡೆದು ಕೆ.ಜಿ. ಹಳ್ಳಿಯಲ್ಲಿ ಕೊನೆಗೊಂಡಿತು.
ಕೆ.ಜಿ.ಹಳ್ಳಿಯಲ್ಲಿ ನಡೆದ ಕಂದಾಯ ಅದಾಲತ್ ಕಾರ್ಯಕ್ರಮ ತಾಲೂಕಿನಲ್ಲಿಯೆ ದಾಖಲೆ ನಿರ್ಮಿಸಿದೆ. ಒಟ್ಟು 200 ಅರ್ಜಿಗಳಲ್ಲಿ 170 ಕ್ಕೂ ಅಧಿಕ ಅರ್ಜಿಗಳನ್ನು ಸ್ಥಳದಲ್ಲಿಯೆ ತಹಸೀಲ್ದಾರ್ ಡಾ. ಸುಧಾಪಾಯಸ್ ಅವರು ಅದಾಲತ್ನಲ್ಲಿ ಪರಿಹರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಉತ್ತಮ ಕಾರ್ಯಕ್ರಮವಾಗಿದ್ದು ಮುಂದಿನ ತಿಂಗಳ 2 ರಿಂದ ಮಾಸ್ತಿ, ಲಕ್ಕೂರು ಹೋಬಳಿಗಳಲ್ಲಿ ಕಂದಾಯ ಅದಾಲತ್ ಕಾರ್ಯಕ್ರಮ ನಡೆಯುತ್ತಿದ್ದು ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಿದರು. ಕೆ.ವೈ. ನಂಜೇಗೌಡ, ಆರ್. ರಾಜಣ್ಣ, ಬಿ.ಜಿ. ಮುನಿಶಾಮಿಗೌಡ, ಉಪತಹಸೀಲ್ದಾರ್ ಶ್ರೀಧರ್, ರೆವೆನ್ಯೂ ಅಧಿಕಾರಿ ನಾರಾಯಣಚಾರ್, ಗ್ರಾಮ ಲೆಕ್ಕಿಗರಾದ ಶ್ರೀನಿವಾಸ್, ಶರತ್, ರಘು ಕಾರ್ಯನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement