ಶಿಕ್ಷಕರ ಸಂಘದ ಅಧ್ಯಕ್ಷರ ಆದೇಶ ಅಸಿಂಧು
ಮಾಲೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ. ಮುನಿನಾರಾಯಣ ಇತ್ತೀಚೆಗೆ ಸಂಘದ ಕಾರ್ಯದರ್ಶಿ ಹಾಗೂ ಖಂಜಾಚಿಯನ್ನು ವಜಾಗೊಳಿಸಿರುವ ಕ್ರಮವನ್ನು ರಾಜ್ಯ ಸಂಘ ಅಸಿಂಧುಗೊಳಿಸಿದ್ದು, ಪ್ರಧಾನ ಕಾರ್ಯದರ್ಶಿ ನರಸಿಂಹ ಹಾಗೂ ಖಂಜಾಚಿ ಅಶ್ವಥ್ನಾರಾಯಣ ಶೆಟ್ಟಿ ಅಧಿಕಾರದಲ್ಲಿ ಮುಂದುವರೆಯಲಿರುವುದಾಗಿ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಂಘದ ಭೈಲಾ ಪ್ರಕಾರ ಒಮ್ಮೆ ಚುನಾಯಿತನಾದ ಪ್ರತಿನಿಧಿ 5 ವರ್ಷ ಅವಿಶ್ವಾಸದಲ್ಲಿ ಇಳಿಸಲು ಸಾಧ್ಯವಿಲ್ಲ. ಆದರೆ ಹಾಲಿ ಅಧ್ಯಕ್ಷ ನಿಯಮ ಉಲ್ಲಂಘನೆ ಮಾಡಿ ಆಯ್ಕೆಮಾಡಿದ್ದಾರೆ. ಇದಕ್ಕೆ ರಾಜ್ಯ ಘಟಕದ ಅನುಮತಿ ಪಡೆಯದೆ ಹೊರಹಾಕುವ ಪ್ರಯತ್ನ ನಡೆಸಿದ್ದಾರೆ. ಈ ರ್ದುನಡತೆ ಬಗ್ಗೆ ರಾಜ್ಯ ಘಟಕಕ್ಕೆ ಮನವಿ ಸಲ್ಲಿಸದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಹಾಗೂ ಪ್ರಧಾನ ಕಾರ್ಯದರ್ಶಿ ವಿ.ಎಂ.ನಾರಾಯಣಸ್ವಾಮಿ ಜಿಲ್ಲಾ ಸಂಘವನ್ನು ಸಂರ್ಪಕಿಸಿ ವಿಷಯ ತಿಳಿದುಕೊಂಡು ಇಲ್ಲಿನ ಅಧ್ಯಕ್ಷ ಹೊರಡಿಸಿದ್ದ ಆದೇಶ ಅಸಿಂಧು ಎಂದು ಘೋಷಿಸಿ, ಹಿಂದಿನವರನ್ನೇ ಮುಂದುವರೆಸುವಂತೆ ಆದೇಶಿಸಿದ್ದಾರೆ ಎಂದರು. ಬಹುದ್ದೂರ್ ಸಾಬ್, ವಿಜಯಕುಮಾರ್ ಮಾತನಾಡಿದರು.