ಶಿಡ್ಲಘಟ್ಟದಲ್ಲಿ ಪಡಿತರ ಖಾತ್ರಿಗೆ ಚಾಲನೆ
ಶಿಡ್ಲಘಟ್ಟ: ಸರ್ಕಾರ ಆಹಾರ ಭದ್ರತಾ ಕಾಯ್ದೆಯಡಿ ಫೆ.1 ರಿಂದ ಪಡಿತರ ಖಾತ್ರಿ ಯೋಜನೆ ಜಾರಿಗೆ ತಂದಿದ್ದು ತಹಸೀಲ್ದಾರರು ಯೋಜನೆಯನ್ನು ಶನಿವಾರ ಜಾರಿಗೊಳಿಸಿದರು. ಪಟ್ಟಣದ ಬಸವರಾಜು ಡಿಪೋಗೆ ಭೇಟಿ ನೀಡಿದ ತಹಸೀಲ್ದಾರ್ರು ಪ್ರತಿ ತಿಂಗಳ 1ನೇ ದಿನಾಂಕದಿಂದ ಅಕ್ಕಿ, ಗೋದಿ, ಸಕ್ಕರೆ ಸಿಗಲಿದ್ದು ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳ್ಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಗಳು ಕೆಲಸ ನಿರ್ವಹಿಸಲಿದೆ ಎಂದು ತಿಳಿಸಿದರು. ಸರ್ಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ಬಿಲ್, ಪಡಿತರ ಕೊಡದಿದ್ದಲ್ಲಿ 1967 ಸಂಖ್ಯೆಗೆ ಅಥವಾ ತಾಲೂಕು ಕಚೇರಿಗೆ ಬಂದು ದೂರು ಸಲ್ಲಿಸಬಹುದೆಂದು ತಿಳಿಸಿದರು. ಆಹಾರ ಶಿರಸ್ತೆದಾರ ಪರಶುಮೂರ್ತಿ, ಪುಡ್ ಇನ್ಸ್ಪೆಕ್ಚರ್ ಶ್ರೀದರ್, ದೇವರಾಜೇಗೌಡ, ಬಸವರಾಜು ಇದ್ದರು.