ಸರ್ವೋದಯ ವಿಶೇಷ ಕಾರ್ಯಕ್ರಮ
ಶಿಡ್ಲಘಟ್ಟ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟೀಯ ಸೇವಾ ಘಟಕದಿಂದ ಸರ್ವೋದಯ ದಿನದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವಚನಕಾರ ತಳಗವಾರ ಆನಂದ್, ಬದುಕು ಇರುವುದು ಭೋಗಕ್ಕಲ್ಲ, ತ್ಯಾಗಕ್ಕೆ ಎಂದು ಸಾರಿದ ಗಾಂಧೀಜಿಯವರ ಸರಳವಾದ ವಿಚಾರಗಳು ಇಂದು ಕಷ್ಟಕರವಾಗಿ ಕಾಣುತ್ತಿದೆ. ನನ್ನಂಥವರು ನೂರಾರು ಜನ ಸಾಯಲಿ, ಆದರೆ ಸತ್ಯ ಮಾತ್ರ ಉಳಿಯಲಿ ಎಂದಿದ್ದ ಗಾಂಧೀಜಿ ತಮ್ಮ ಕೆಲಸದ ಬಗ್ಗೆ, ಕೆಲಸದ ಹಿಂದೆ ಇದ್ದ ಗುರಿಗಳ ಬಗ್ಗೆ ಆತ್ಮವಿಶ್ವಾಸವಿತ್ತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಎನ್. ಆನಂದ್ ವಹಿಸಿದ್ದರು. ಉಪನ್ಯಾಸಕ ಮುನಿರಾಜು, ಮಂಗಳಗೌರಿ, ಶಿವಾರೆಡ್ಡಿ, ಲೋಕೆಶ್, ಅಬ್ದುಲ್ ಅಲೀಮ್, ಚಲಪತಿ ಇದ್ದರು.