ಕುಸಿದ ಟೊಮೇಟೊ ಬೆಲೆ ಆತಂಕದಲ್ಲಿ ರೈತ
ಮುಳಬಾಗಲು; ಟೊಮೇಟೊ ಬೆಲೆ ಕುಸಿದಿರುವುದರಿಂದ ತಾಲೂಕಿನ ರೈತರು ಕಂಗಾಲಾಗಿದ್ದು, ಮಾಡಿದ ಸಾಲ ತೀರಿಸಲು ದಾರಿಯಿಲ್ಲದೆ ಚಿಂತೆಯಲ್ಲಿದ್ದಾರೆ.
ತಾಲೂಕಿನ ಎರಡು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಟೊಮೇಟೊ ಬೆಳೆದಿದ್ದು ಎನ್. ವಡ್ಡಹಳ್ಳಿ ಬಳಿ ಇರುವ ಉಪ ಮಾರುಕಟ್ಟೆಗೆ ಪ್ರತಿ ದಿವಸ 25 ಸಾವಿರ ಕ್ರೇಟ್ ಟೊಮೇಟೊ ಬರುತ್ತಿದೆ. 15 ಕೆಜಿಗಳ ಗುಣಮಟ್ಟದ ಟೊಮೇಟೊ 15 ರೂಪಾಯಿಗೆ ಹರಾಜಾಗುತ್ತಿದೆ.
ಶೇ.50 ರಷ್ಟು ಟೊಮೇಟೊ ಬೇಡಿಕೆ ಇಲ್ಲದ ಕಾರಣ ಹರಾಜಾಗದೆ ಉಳಿದಿದೆ. ಸಾಮಾನ್ಯವಾಗಿ ಚೆನ್ತೈ ವ್ಯಾಪಾರಸ್ಥರು ಮಾರುಕಟ್ಟೆಗೆ ಬಂದು ಟೊಮೇಟೊ ಖರೀದಿ ಮಾಡುತ್ತಿದ್ದರು. ಆದರೆ ಈಗ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಟೊಮೇಟೊ ಬೆಳೆದಿರುವುದರಿಂದ ವ್ಯಾಪಾರಿಗಳು ಇತ್ತ ತಲೆಹಾಕುತ್ತಿಲ್ಲ. ಬಂದರೂ ಅತಿ ಕಡಿಮೆ ಹರಾಜು ಕೂಗುತ್ತಾರೆ. ಈಗ ಚೆನ್ತೈ ಮಾರುಕಟ್ಟೆಯಲ್ಲೂ ಒಂದು ಕ್ರೇಟ್ ಟೊಮೇಟೊ ಕೇವಲ 30 ರುಗಳಿಗೆ ಹರಾಜು ಆಗುತ್ತಿದೆ. ಅಲ್ಲಿ ಬೇಡಿಕೆ ಕಮ್ಮಿಯಾಗಿದೆ. ಇಲ್ಲಿಂದ ಚೆನ್ತೈಗೆ ತೆಗೆದುಕೊಂಡು ಹೋದರೆ ಸಾಗಣೆ ವೆಚ್ಚ ಬರುವುದಿಲ್ಲ. ಒಂದು ಎಕರೆ ಟೊಮೇಟೊ ಬೆಳೆಯ ಬೇಕಾದರೆ ಒಂದು ಲಕ್ಷದವರೆಗೂ ಖರ್ಚು ಬರುತ್ತದೆ. ಬೆಲೆ ಕುಸಿತದಿಂದ ರೈತ ನಷ್ಟ ಅನುಭವಿಸುವಂತಾಗಿದೆ.