ಖಾಸಗಿ ಬಸ್ ಡಿಕ್ಕಿ: ಎರಡು ಎತ್ತು, ವ್ಯಕ್ತಿ ಸಾವು
ಕೋಲಾರ: ತಾಲೂಕಿನ ಮೂರಾಂಡಹಳ್ಳಿ ಬಳಿ ಮರಳು ಸಾಗಿಸುತ್ತಿದ್ದ ಎತ್ತಿನ ಗಾಡಿಗೆ ಖಾಸಗಿ ಬಸ್ಸೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಎತ್ತಿನಗಾಡಿ ಓಡಿಸುತ್ತಿದ್ದ ವ್ಯಕ್ತಿ ಹಾಗೂ ಎರಡು ಎತ್ತುಗಳು ಸತ್ತಿರುವ ಘಟನೆ ಭಾನುವಾರ ನಡೆದಿದೆ.
ಮೃತ ಎತ್ತಿನಗಾಡಿ ಸವಾರನನ್ನು ಮೂರಾಂಡಹಳ್ಳಿ ನಿವಾಸಿ ಶ್ರೀರಾಮಪ್ಪ(45) ಎಂದು ಗುರುತಿಸಲಾಗಿದೆ. ರಸ್ತೆದಾಡುತ್ತಿದ್ದಾಗ ಈ ಅಪಘಾತ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಸ್ಸಿನ ಚಾಲಕ ಪರಾರಿ ಆಗಿದ್ದಾನೆ, ಅಪಘಾತಕ್ಕೆ ಚಾಲಕನ ಅಜಾಗರುಕತೆಯೇ ಕಾರಣ ಎಂದು ಆರೋಪಿಸಿ ಗ್ರಾಮಸ್ಥರು ಬಸ್ಸಿಗೆ ಕಲ್ಲು ತೂರಾಡಿದ್ದರಿಂದ ಬಸ್ಸು ಖಜಂಗೊಂಡಿದೆ. ಬಸ್ಸಿನಲ್ಲಿದ್ದವರಿಬ್ಬರಿಗೂ ಸಣ್ಣ ಪುಟ್ಟಗಾಯಗಳಾಗಿವೆ. ಸ್ಥಳಕ್ಕೆ ಡಿವೈಎಸ್ಪಿ ಅಶೋಕರ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.