ವಿದ್ಯಾರ್ಥಿ ಅಪಹರಣ; ದೂರು ದಾಖಲು
ಕೆಜಿಎಫ್: ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿ ಕಾಡಿನಲ್ಲಿಟ್ಟಿರುವ ಘಟನೆ ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.ಕೋಡಿಗೇನಹಳ್ಳಿ ನಿವಾಸಿ ವೇಮಾರೆಡ್ಡಿ ಎಂಬವರ ತಮ್ಮನ ಮಗ ಪ್ರದೀಫ್ಕುಮಾರ್(19) ಅಪಹರಣಕ್ಕೊಳಗಾದ ವಿದ್ಯಾರ್ಥಿ. ಈತ ಕೋರಮಂಡಲ್ ಪ್ರದೇಶದ ಸ್ಕೂಲ್ ಆಫ್ ಮೈನ್ಸ್ ತಾಂತ್ರಿಕ ವಿದ್ಯಾಲಯದಲ್ಲಿ ಡಿಪ್ಲಮೋ ವ್ಯಾಸಾಂಗ ಮಾಡುತ್ತಿದ್ದು ಪ್ರತಿ ದಿನ ಬೆಳಗ್ಗೆ ಕಾಲೇಜುಗೆ ಹೋಗುತ್ತಿದ್ದನು. ಶನಿವಾರ ಬೆಳಗ್ಗೆ ಕಾಲೇಜಿಗೆ ಹೋಗಿದ್ದು ಸಂಜೆ 4 ಗಂಟೆಯಾದರೂ ಮನೆಗೆ ಬಾರದೆ ಇದ್ದುದ್ದರಿಂದ ವೇಮಾರೆಡ್ಡಿ ಕಾಲೇಜಿನಲ್ಲಿ ವಿಚಾರಿಸಿದಾಗ ಮನೆಗೆ ಹೋದ ಎಂದು ತಿಳಿಸಿದ್ದು, ಸ್ವತಃ ಪ್ರದೀಪ್ಕುಮಾರ್ ಮನೆಗೆ ಕರೆ ಮಾಡಿ ನನ್ನನ್ನು 6-7 ಮಂದಿ ಅಪರಿಚಿತರು ಕಾಡಿನಲ್ಲಿ ಇಟ್ಟುಕೊಂಡಿದ್ದಾರೆ ಎಂದು ತಿಳಿಸಿದ್ದಾನೆ. ಇದರಿಂದ ವೇಮಾರೆಡ್ಡಿ ರಾಬರ್ಟ್ಸನ್ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.