ಶ್ರೀಪತಂಜಲಿ ಯೋಗ ಸಮಿತಿಯಿಂದ ರಕ್ತದಾನ
ಕೋಲಾರ: ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗಾಚಾರ್ಯ ಅಜಿತ್ ಕುಮಾರ್ ಸ್ಮರಣಾರ್ಥ ಸೇವಾದಿನದ ಅಂಗವಾಗಿ ಇತ್ತೀಚೆಗೆ ರಕ್ತದಾನ ಶಿಬಿರ ಮತ್ತು ಶಾಲಾ ಮಕ್ಕಳಿಗೆ ಬಟ್ಟೆ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪತಂಜಲಿ ಯೋಗ ಮಂದಿರದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ಜಾಲಪ್ಪ ಆಸ್ಪತ್ರೆಯ ವೈದ್ಯ ಡಾ. ರಕ್ಷಿತ್ ಚಾಲನೆ ನೀಡಿ ರಕ್ತದಾನದ ಮಹತ್ವ ತಿಳಿಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗ ಸಮಿತಿ ಅಧ್ಯಕ್ಷ ಬಿಸಪ್ಪಗೌಡ ವಹಿಸಿದ್ದು, ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಪಡೆಯುವುದರ ಜತೆಗೆ ಒಳ್ಳೆಯ ಮನಸ್ಸು, ಸೇವಾ ಮನೋಭಾವ ವೃದ್ಧಿಗೂ ಒತ್ತು ನೀಡುವ ಕಾರ್ಯ ನಡೆದಿದೆ ಎಂದರು.