ಸಮ್ಮೇಳನಕ್ಕೆ ಭರದ ಸಿದ್ಧತೆ
ತುರುವೇಕೆರೆ: 10 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆ.10 ಮತ್ತು 11 ರಂದು ನಡೆಯಲಿದೆ.
ಇದರ ಅಂಗವಾಗಿ ಶಾಸಕ ಎಂ.ಟಿ. ಕೃಷ್ಣಪ್ಪ, ತಹಸೀಲ್ದಾರ್ ನಂಜಪ್ಪ, ತಾಲೂಕು ಕಸಾಪ ಅಧ್ಯಕ್ಷ ಸಾ.ಶಿ.ದೇವರಾಜು, ಸಂಚಾಲಕ ಕೊಂಡಜ್ಜಿ ವಿಶ್ವನಾಥ್ ಹಾಗೂ ಹಣಕಾಸು ಸಮಿತಿ ಅಧ್ಯಕ್ಷ ಬಿ.ಎಸ್. ದೇವರಾಜು ವೇದಿಕೆಯ ಭೂಮಿ ಪೂಜೆ ನೆರವೇರಿಸಿದರು.
10 ನೇ ಜಿಲ್ಲಾ ಕನ್ನಡ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ದೊಡ್ಡರಂಗೇಗೌಡರನ್ನು ಆಯ್ಕೆ ಮಾಡಲಾಗಿದೆ. ದಿವಂಗತ ಕಲ್ಚರ್ ಕೆಮಿಡಿಯನ್ ಕಣತೂರು ಹಿರಣ್ಣಯ್ಯ ಅವರ ಬಯಲು ರಂಗ ಮಂದಿರದ ಮುಂಭಾಗ ಭಾರಿ ವಿಸ್ತಾರದ ವೇದಿಕೆ ಸಿದ್ಧಗೊಳ್ಳುತ್ತಿದೆ.