ಕು(ರು)ಡುಗೋಲು ಪ್ರೇಮಿ
ಮೈಸೂರು: ತನ್ನ ಪ್ರೇಮ ನಿವೇದನೆ ನಿರಾಕರಿಸಿದ ಯುವತಿಗೆ ಯುವಕನೊಬ್ಬ ಕುಡುಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ನಗರದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೈಸೂರು ತಾಲೂಕು ನಗರ್ತಳ್ಳಿ ನಿವಾಸಿ ಹಾಗೂ ಮರಿಮಲ್ಲಪ್ಪ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಪವಿತ್ರಾ (ಹೆಸರು ಬದಲಿಸಲಾಗಿದೆ) ಇರಿತಕ್ಕೊಳಗಾದವರು. ನಾಗನಹಳ್ಳಿ ನಿವಾಸಿ ಸಣ್ಣಸ್ವಾಮಿ ಎಂಬವರ ಪುತ್ರ ಸ್ವಾಮಿ (23) ಕುಡುಗೋಲಿನಿಂದ ಕೊಲೆಗೆ ಯತ್ನಿಸಿದ ಆರೋಪಿ. ತನ್ನನ್ನು ಪ್ರೀತಿಸುವಂತೆ ಬಾವನ ತಂಗಿಯನ್ನು ಸ್ವಾಮಿ ಕಾಡುತ್ತಿದ್ದ. ಆದರೆ, ಯುವತಿ ಮನೆಯವರು ಬೇರೆ ಯುವಕನೊಂದಿಗೆ ವಿವಾಹ ಮಾಡಲು ನಿರ್ಧರಿಸಿದ್ದರು. ಇದರಿಂದ ರೊಚ್ಚಿಗೆದ್ದ ಸ್ವಾಮಿ, ಯುವತಿ ಸೋಮವಾರ ಕಾಲೇಜಿಗೆ ಬರುತ್ತಿದ್ದಾಗ ಹಿಂಬಾಲಿಸಿ ಮಾರ್ಗ ಮಧ್ಯೆ ಕುಡುಗೋಲಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ. ಕೊಲೆ ಯತ್ನ ಪ್ರಕರಣ ದಾಖಲಾಗಿದೆ.