ಜಿಲ್ಲಾ ಬ್ಲಾಕ್ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಆಯ್ಕೆ
ಚಿಕ್ಕಬಳ್ಳಾಪುರ: ಜಿಲ್ಲಾ ಬ್ಲಾಕ್ ಹಿಂದುಳಿದ ವರ್ಗಗಳ ಕಾಂಗ್ರೆಸ್ ಸಮಿತಿಗೆ ಕಂದವಾರ ವಾರ್ಡಿನ ಕೆ. ಮುನಿಸ್ವಾಮಿರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಸಮಿತಿ ರಾಜ್ಯಾಧ್ಯಕ್ಷ ಅದೇಶ ನೀಡಿದ್ದಾರೆ.
ಪತ್ರಕರ್ತರಿದ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆ ಮಡಿರುವ ಪತ್ರಕರ್ತರಿಗೆ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2012 ಮತ್ತು 2013 ಎರಡು ದಿನದರ್ಶಿ ವರ್ಷಗಳಿಗಾಗಿ ಅರ್ಹ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕನಿಷ್ಠ 10 ವರ್ಷ ಪತ್ರಿಕೋದ್ಯಮ, ವಿದ್ಯುನ್ಮಾನ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಅಭಿವೃದ್ದಿಮತ್ತು ಪರಿಸರ ಪತ್ರಿಕೋದ್ಯಮಕ್ಕೆ ವಿಶೇಷ ಕೊಡುಗೆ ನೀಡಿರುವವರು ನೇರವಾಗಿ ಅಥವಾ ಜಿಲ್ಲಾ ವಾರ್ತಾಧಿಕಾರಿಗಳ ಮುಖಾಂತರ ಅಥವಾ ಪತ್ರಿಕಾ ಸಂಘ ಸಂಸ್ಥೆಗಳ ಮುಖಾಂತರ ಬಿಳಿಹಾಳೆಯಲ್ಲಿ ಸಂಪೂರ್ಣ ಸ್ವವಿವರ, ಸಂಪರ್ಕ ವಿಳಾಸ, ಮೊಬೈಲ್ ಸಂಖ್ಯೆ ಟೈಪ್ ಮಾಡಿ, ಲಕೋಟೆಯ ಮೇಲೆ ಪ್ರಶಸ್ತಿಯ ಹೆಸರನ್ನು ನಮೂದಿಸಿ ಅರ್ಜಿಯನ್ನು ಫೆ.10 ರೊಳಗೆ ಸಲ್ಲಿಸಬಹುದು. ಮಾಹಿತಿಗಾಗಿ ನಿರ್ದೇಶಕರು, ವಾರ್ತಾ ಇಲಾಖೆ, ವಾರ್ತಾ ಸೌಧ, 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001, ದೂ. 080-22028034 ಸಂಪರ್ಕಿಸಬಹುದು.