'ಟಿವಿಗೇ ಜೋತು ಬೀಳದಿರಿ'
ಬಂಗಾರಪೇಟೆ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಓದಿನ ಕಡೆ ಹೆಚ್ಚಿನ ಆಸಕ್ತಿಯನ್ನು ತೋರುವ ಮೂಲಕ ಮುಂದಿನ ಭವಿಷ್ಯದಲ್ಲಿ ಸ್ವಾವಲಂಭಿಗಳಾಗಿ ಬಾಳಬೇಕೆಂದು ವೃತ್ತ ನಿರೀಕ್ಷಕರ ವೆಂಕಟಾಚಲಪತಿ ಹೇಳಿದರು.
ಪಟ್ಟಣದ ಜ್ಯೋಜಿ ಪಬ್ಲಿಕ್ ಶಾಲೆಯ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಇಂದಿನ ಮಕ್ಕಳು ಟಿವಿ ಮಾಧ್ಯಮಕ್ಕೆ ಜೋತು ಬಿದ್ದು ಓದಿನ ಕಡೆ ಒಲವನ್ನು ತೋರದೆ ತಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡುಕೊಳ್ಳುತ್ತಿದ್ದಾರೆ, ಅಲ್ಲದೆ ಭವಿಷ್ಯ ರೂಪಿಸಿಕೊಳ್ಳುವ ಸಮಯದಲ್ಲಿ ದುಶ್ಚಟಗಳಿಗೆ ಬಲಿಯಾಗುವರು. ಇಂಥ ಚಟಗಳಿಗೆ ಬಲಿಯಾಗದೆ ಉತ್ತಮವಾಗಿ ಓದಿ ಮುಂದಿನ ದೇಶವನ್ನು ಮುನ್ನಡೆಸುವ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಹೇಳಿದರು.
ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಮಾತನಾಡಿ ಮಕ್ಕಳಲ್ಲಿಡಗಿರುವ ಪ್ರತಿಭೆಯನ್ನು ಹೊರ ತರಲು ವಾರ್ಷಿಕೋತ್ಸವ ಸಮಾರಂಭಗಳು ಸೂಕ್ತ ವೇದಿಕೆಯಾಗಿದೆ ಎಷ್ಟೇ ಮಕ್ಕಳಲ್ಲಿ ಪ್ರತಿಭೆಯಿದ್ದರೂ ಹೊರ ಪ್ರಪಂಚಕ್ಕೆ ಪರಿಚಯಿಸಲು ಅವಕಾಶ ಸಿಗದೆ ವಂಚಿತರಾಗುವರು ಅಂತಹ ಈ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದರಲ್ಲದೆ ಮಕ್ಕಳು ಎಲ್ಲಾ ಭಾಷೆಗಳನ್ನು ಕಲಿಯಬೇಕು ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಕಡ್ಡಾಯಗೊಳಿಸುವ ಮೂಲಕ ನಮ್ಮ ನೆಲ ಜಲವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು, ಕ್ಷೇತ್ರ ಗಡಿ ಭಾಗದಲ್ಲಿದ್ದರೂ ಇಲ್ಲಿ ಭಾಷೆ ಸಮಸ್ಯೆಯಿಲ್ಲ ಎಲ್ಲರೂ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಸಹಬಾಳ್ವೆ ನಡೆಸುತ್ತಿದ್ದಾರೆ. ಶಿಕ್ಷಕರು ಮಕ್ಕಳಿಗೆ ಬರೀ ಪುಸಕ್ತದಲ್ಲಿನ ವಿಷಯವನ್ನು ಮಾತ್ರ ಬೋದಿಸದೆ ಇತರೇ ವಿಷಯಗಳನ್ನು ಬೋದಿಸುವ ಮೂಲಕ ಮಕ್ಕಳಿಗೆ ಇತರೇ ವಿಷಯಗಳ ಪರಿಚಯ ಮಾಡಿಕೊಡಬೇಕೆಂದು ಕೋರಿದರು.
ನಂತರ ಮಕ್ಕಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಿತು. ವೇದಿಕೆ ಮೇಲೆ ಬೆಸ್ಕಾಂ ಎಇಇ ಹುಸೇನಿ, ಜ್ಯೋತಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಆರ್. ಜಗದೀಶ್, ಪ್ರಾಂಶುಪಾಲ ಸತೀಶ್ ಮತ್ತಿತರರು ಇದ್ದರು.