ಫುಟ್ಪಾತ್ ಒತ್ತುವರಿ ತೆರವು
ಕೋಲಾರ: ಪಾದಚಾರಿಗಳಿಗೆ ಅಡ್ಡಿಯಾಗಿದ್ದ ಫುತ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಗರಸಭೆ ಆಯುಕ್ತ ಜಗದೀಶ್ ನೇತೃತ್ವದಲ್ಲಿ ಮುಂದುವರೆದಿದೆ.
ಸೋಮವಾರ ಸಿಬ್ಬಂದಿಯೊಂದಿಗೆ ನಗರದ ಖಾಸಗಿ ಬಸ್ ನಿಲ್ದಾಣ, ದೊಡ್ಡಪೇಟೆ, ಶಾರದಾಚಿತ್ರ ಮಂದಿರ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಫುತ್ಪಾತ್ಗಳ ಮೇಲೆ ವ್ಯಾಪಾರಿಗಳು ಇಡಲಾಗಿದ್ದ ಶೋಕೇಸ್ಗನ್ನು, ರೆಡಿಮೇಡ್ ಉಡುಪುಗಳ ಪ್ರದರ್ಶನದ ಸ್ಟ್ಯಾಂಡ್ಗಳನ್ನು, ಫುತ್ಪಾತ್ ಮೇಲೆ ನಿರ್ಮಿಸಿದ್ದ ಮೇಲ್ಛಾವಣಿಯನ್ನು ತೆರವು ಮಾಡಿಸಲಾಯಿತು.
ನಗರದಲ್ಲಿ ನಗರೋತ್ಥಾನ 2ನೇ ಹಂತದ ಕಾಮಗಾರಿಗಳು ನಡೆಯುತ್ತಿದ್ದು, ಚರಂಡಿ ಹಾಗೂ ರಸ್ತೆಗಳ ಅಭಿವೃದ್ಧಿ ಹಿನ್ನಲೆಯಲ್ಲಿ ನಗರಸಭೆ ಕಾರ್ಯಾಚರಣೆ ನಡೆಸುತ್ತಿದ್ದು ಕೆಲ ವ್ಯಾಪಾರಿಗಳು ಕ್ರಮವನ್ನು ಪ್ರಶ್ನಿಸಿದರೆ ಬಹುತೇಕರು ಸಹಕಾರ ನೀಡುತ್ತಿದ್ದಾರೆ.
ಕೆಲವು ಕಡೆ ದೊಡ್ಡ ಅಂಗಡಿಗಳ ಮಾಲೀಕರು ಅಂಗಡಿ ಹಾಕಿರುವ ಮೇಲ್ಛಾವಣಿಯನ್ನು ತೆರವುಗೊಳಿಸದೆ ಸಣ್ಣ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ಕಣ್ಣಿಟ್ಟಿರುವುದು ಟೀಕೆಗೆ ಗ್ರಾಸವಾಯಿತು. ಕಾನೂನು ಪ್ರತಿಯೊಬ್ಬರಿಗೆ ಒಂದೇ ಆಗಿರಬೇಕು. ತಾರತಮ್ಯ ಮಾಡಬೇಡಿ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಿರಂತರವಾಗಿ ನಡೆಯಲಿ, ರಾಜಕೀಯ ಒತ್ತಡಗಳಿಗೆ ಮಣಿದು ಸ್ಥಗಿತಗೊಳಿಸಬಾರದು, ಬಡ ಫುಟ್ಪಾತ್ ವ್ಯಾಪಾರಿಗಳ ಸಭೆ ಕರೆದು ಅವರ ಮನವೊಲಿಸಬೇಕು, ನಗರದಲ್ಲಿ ಸೂಕ್ತವಾದ ಜಾಗದಲ್ಲಿ ಬಡವರಿಗೆ ಅಂಗಡಿಗಳನ್ನು ಇಟ್ಟುಕೊಳ್ಳಲು ಯೋಜನೆ ರೂಪಿಸಬೇಕು, ಯಾವುದೇ ಕಾರಣಕ್ಕೂ ಫುಟ್ಪಾತ್ಗಳ ಮೇಲೆ ಇಲ್ಲವೇ ಚರಂಡಿಗಳ ಮೇಲೆ ವ್ಯಾಪಾರ ನಡೆಸಲು ಅವಕಾಶ ನೀಡದಂತೆ ಸಾರ್ವಜನಿಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಾರ್ಯಾಚರಣೆಯಲ್ಲಿ ನಗರಸಭೆ ಆಯುಕ್ತ ಜಗದೀಶ್, ಇಇ ಗರುಡಾಚಲಮೂರ್ತಿ, ಎಇಇ ಕೊಟ್ರೇಶ್ ಪಾಲ್ಗೊಂಡಿದ್ದರು.