ಮಾಲೂರು ರಸ್ತೆ ಅಭಿವೃದ್ಧಿಗೆ 7 ಕೋಟಿ ಬಿಡುಗಡೆ
ಮಾಲೂರು: ಪಟ್ಟಣದ ರಸ್ತೆಗಳ ಎರಡನೇ ಹಂತದ ಡಾಂಬರೀಕರಣಕ್ಕೆ 7 ಕೋಟಿ ರು. ಬಿಡುಗಡೆಯಾಗಿದ್ದು, ಇನ್ನೂಂದು ತಿಂಗಳಲ್ಲಿ ರಸ್ತೆಗಳು ಅಭಿವೃದ್ಧಿಗೊಳ್ಳಲಿದೆ ಎಂದು ಶಾಸಕ ಮಂಜುನಾಥ್ಗೌಡ ಹೇಳಿದರು.
ಪಟ್ಟಣದ 13 ನೇ ವಾರ್ಡ್ನ ಶ್ರೀರಾಮ ಭಜನೆ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಪಡಿತರ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ 5 ಕೋಟಿ ವೆಚ್ಚದಲ್ಲಿ ಪಟ್ಟಣದ ಹಲವು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುತ್ತಿದ್ದು, ಇನ್ನುಳಿದ ರಸ್ತೆಗಳ ಡಾಂಬರೀಕಣಕ್ಕಾಗಿ ಈಗ 7 ಕೋಟಿ ರು.ಬಿಡುಗಡೆಯಾಗಿದೆ ಎಂದರು. ಕಾಮಗಾರಿ ಗುಣಮಟ್ಟ ಕಾಪಾಡುವುದು ಪುರಸಭೆ ಸದಸ್ಯರ ಕರ್ತವ್ಯ ಎಂದರು. ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗಾಗಿ ಒಂದು ಕೋಟಿ ವೆಚ್ಚದಲ್ಲಿ 22 ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ ಎಂದರು.
ಪಡಿತರ ಚೀಟಿ, ವೃದ್ಯಾಪ ವೇತನ ಸೇರಿದಂತೆ ಇತರೆ ವೇತನಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ವಾರ್ಡ್ ಸದಸ್ಯ ವೇಮನ ಹೇಳಿದರು.