ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ವಿಕಲಚೇತನರಿಗಾಗಿ ತರಬೇತಿ ಮೇಳ

Rashmi Kasaragodu
Updated On : 4 Feb 2014, 1:41 am

ಚಿಕ್ಕಬಳ್ಳಾಪುರ: ವಿಕಲಚೇತನರಿಗೆ ಉದ್ಯೋಗ ಕೊಡಲು ಅವರ ದೈಹಿಕ ಸಮಸ್ಯೆಗಳನ್ನು ನೋಡಿಕೊಂಡು ಹಿಂದೇಟು ಹಾಕುವಂತಹುದೇ ಹೆಚ್ಚು. ಈ ಹಿನ್ನೆಲೆಯಲ್ಲಿ ವಿಕಲಚೇತನರು ಉದ್ಯೋಗ ಪಡೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಮಾಡಲು ವಿಕಲಚೇತನರಿಗಾಗಿ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ವಿಕಲಚೇತರ ಸಂಘಟನೆ(ಕೆ.ವಿ.ಎಸ್.)ಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಫೆ.15 ರಂದು ಬೃಹತ್ ತರಬೇತಿ ಮೇಳ ನಡೆಯಲಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿದ ಮಾತನಾಡಿದ ಕೆವಿಎಸ್ನ ಅಧ್ಯಕ್ಷೆ ಉಷಾ ಕಿರಣ್ ಮಾತನಾಡಿ, ವಿಕಲಚೇತನರು ಸ್ವಾವಲಂಬಿ ಜೀವನ ನಡೆಸುವಂತಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸರ್ಕಾರದಿಂದ ವಿಕಲಚೇತನರಿಗಾಗಿ ಅನೇಕ ಕಾರ್ಯಕ್ರಮಗಳ ಮೂಲಕ ಹೆಚ್ಚಿನ ನೆರವನ್ನು ನೀಡಲಾಗುತ್ತಿದೆ. ಆದರೆ, ಸೌಲಭ್ಯಗಳನ್ನು ಸಮರ್ಪಕವಾಗಿ ವಿಕಲಚೇತನರಿಗೆ ದೊರೆಯುವಂತೆ ಮಾಡಬೇಕಾದ ಜವಾಬ್ದಾರಿಯನ್ನು ಅಧಿಕಾರಿಗಳು ನಿರ್ವಹಿಸಬೇಕು. ಇದಕ್ಕೆ ಅನುಗುಣವಾಗಿ ವಿಕಲಚೇತನರು ಸಹ ತಮಗೆ ದೊರೆಯುವಂತಹ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು. ಈ ನಿಟ್ಟಿನಲ್ಲಿ ವಿಕಲಚೇತನರು ಪ್ರಮುಖವಾಗಿ ಸಂಘಟಿತರಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement