ವಿದ್ಯುತ್ ಶಾಕ್: ಕುರಿಗಳ ಸಾವು
ಚಿಂತಾಮಣಿ: ನೀರು ಕುಡಿಯಲು ಹೋದ ಕುರಿಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿರುವ ಬಗ್ಗೆ ರೈತ ನಾರಾಯಣಸ್ವಾಮಿ ಕೃಷಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಎಂ. ಗೊಲ್ಲಹಳ್ಳಿ ಚನ್ನರಾಯಗಡ್ಡ ಗ್ರಾಮದ ಬಳಿ ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಹಲವು ಕುರಿಗಳು ಕೊಳವೆ ಬಾವಿ ಬಳಿ ನೀರು ಕುಡಿಯಲು ಹೋಗಿ ವಿದ್ಯುತ್ ಶಾಕ್ನಿಂದ 3 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿ ಇನ್ನೂ ಹಲವು ಸಾವು ಬದುಕಿನ ಜೊತೆ ಹೋರಾಟ ನಡೆಸುತ್ತಿರುವುದಾಗಿ ರೈತ ಕೃಷಿ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಮನವಿ ನೀಡಿದ್ದಾರೆ.