ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶ್ರೀಗಂಧ ಕಳ್ಳರಿಬ್ಬರ ಬಂಧನ

Rashmi Kasaragodu
Updated On : 4 Feb 2014, 1:40 am

ಚಿಂತಾಮಣಿ: ಅಕ್ರಮವಾಗಿ ಲಕ್ಷಾಂತರ ರು. ಬೆಲೆ ಬಾಳುವ ಶ್ರೀಗಂಧ ಮರವನ್ನು ಕಟಾವು ಮಾಡಿ ಮಾರಾಟ ಮಾಡಲು ಯತ್ನಿಸಿದ ಇಬ್ಬರೂ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಮಾಲೂ ಸಮೇತ ಬಂಧಿಸಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸೀತಾರಾಮಪುರ ಗ್ರಾಮದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.
ತಾಲೂಕಿನ ಸೀತಾರಾಮಪುರ ಗ್ರಾಮದಲ್ಲಿನ ರಾಜ ಕಾಲುವೆ ಬಳಿ ಇರುವ ಬೃಹತ್ ಶ್ರೀಗಂಧ ಮರ ಸುಮಾರು 3 ಲಕ್ಷ ರು. ಬೆಲೆ ಬಾಳುವ ಮರವನ್ನು ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಹೋಬಳಿಯ ನಾಗಿರೆಡ್ಡಿಪಲ್ಲಿ ಗ್ರಾಮದ ಅನ್ಸರ್ ಮತ್ತು ರವಣಪ್ಪ ಸೇರಿ ಸೋಮವಾರ ಬೆಳಿಗ್ಗೆ ಶ್ರೀಗಂಧ ಮರವನ್ನು ಅಕ್ರಮವಾಗಿ ಕಡಿದು ಶ್ರೀಗಂಧ ತುಂಡುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಬಟ್ಲಹಳ್ಳಿ ಠಾಣೆ ಸಬ್ ಇನ್ಸೆಪೆಕ್ಟರ್ ಪ್ರವೀಣ್ಕುಮಾರ್ ಹಾಗೂ ಸಿಬ್ಬಂದಿ ವರ್ಗ ದಾಳಿ ನಡೆಸಿ ಮಾಲೂ ಸಮೇತ ಇಬ್ಬರ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಟ್ಲಹಳ್ಳಿ ಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement