ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸಲಹಾ ಪೆಟ್ಟಿಗೆಯಿಂದ ಗುಣಮಟ್ಟ ಸುಧಾರಣೆ

Rashmi Kasaragodu
Updated On : 4 Feb 2014, 1:42 am

ಟೇಕಲ್: ಕೊಂಡಶೆಟ್ಟಹಳ್ಳಿ ಗ್ರಾಪಂ ಕಾರ್ಯಾಲಯದಲ್ಲಿ ಒಂದು ದೂರು ಮತ್ತು ಸಲಹಾ ಪೆಟ್ಟಿಗೆ ಇಡಲಾಗಿದ್ದು ಇದರಿಂದ ನರೇಗಾ ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಲಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ವಸಂತಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿ. ಖಾತ್ರಿ ಕಾರ್ಯಕ್ರಮದಡಿ ಪ್ರತಿ ಹಳ್ಳಿಯಲ್ಲೂ ಕಾಮಗಾರಿ ನಡೆಯುತ್ತಿದ್ದು ಗುಣಮಟ್ಟದ ಕಾಮಗಾರಿ ನಡೆಯುತ್ತಿದೆಯಾ, ಇಲ್ಲವಾ ಎಂಬ ಬಗ್ಗೆ ಸಾರ್ವಜನಿಕರು ದೂರು ಬರೆದು ಪೆಟ್ಟಿಗೆಯಲ್ಲಿ ಹಾಕಿದರೆ ಈ ಬಗ್ಗೆ ಗ್ರಾಪಂನಲ್ಲಿ ಪ್ರತಿದಿನ ಪರಿಶೀಲನೆ ನಡೆಸಲಾಗುತ್ತದೆ ಎಂದರು. ಅಗತ್ಯವಿದ್ದರೆ ದೂರುದಾರ ಹೆಸರನ್ನು ಅರ್ಜಿಯಲ್ಲಿ ತಿಳಿಸಬಹುದು ಇಲ್ಲದಿದ್ದರೆ ಮಾಹಿತಿ ಮಾತ್ರ ಕೊಡಬಹುದು. ಪ್ರತಿದಿನ ಬಂದ ಅರ್ಜಿ ನಮೂದಿಸಲು ನೋಂದಣಿ ಪುಸ್ತಕ ತೆರೆಯಲಾಗಿದ್ದು ಅದನ್ನು ಅಲ್ಲಿ ನಮೂದಿಸಲಾಗುತ್ತದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement