ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಂತರ್ಜಲ ಉಳಿತಾಯ ಎಲ್ಲರ ಕರ್ತವ್ಯ

Vishwanath S
Updated On : 6 Feb 2014, 12:58 pm

ಚಿಕ್ಕಬಳ್ಳಾಪುರ: ಅಂತರ್ಜಲ ಅಮೂಲ್ಯವಾದ ಸಂಪತ್ತು. ಇದರ ಸೂಕ್ತ ನಿರ್ವಹಣೆ ಮತ್ತು ಉಳಿತಾಯ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಮೈಸೂರು ದಕ್ಷಿಣ ವಲಯದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಭಾರಿ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ ತಿಳಿಸಿದರು.
ಬೆಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಪಂ ಆಶ್ರಯದಲ್ಲಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಅಂತರ್ಜಲ ಜನಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಅಂತರ್ಜಲದ ಸದ್ಬಳಕೆ ಹಾಗೂ ನಿರ್ವಹಣೆ ಕುರಿತು ಎಲ್ಲಡೆ ಜಾಗೃತಿ ಶಿಬಿರಗಳು ನಡೆಯಬೇಕಾಗಿದೆ. ಜಲವೇ ಜೀವನ ಅಂತರ್ಜಲವೇ ಚೇತನ ಎಂಬುದನ್ನು ನಾವು ಮನಗಾಣಬೇಕಾಗಿದೆ ಎಂದವರು.
ರಾಸಾಯನಿಕ ತಜ್ಞೆ ಡಾ.ಎಂ.ಬಿ. ದೀಪ ಮಾತನಾಡಿ, ನೀರು ಎಲ್ಲಿ ಹರಿಯುವುದೋ ಅಲ್ಲಿ ನಾಗರಿಕತೆ ಅರಳುತ್ತದೆ, ಸಮರ್ಪಕ ನೀರಿನ ಬಳಕೆ ಹಸಿರು ಕ್ರಾಂತಿಯ ಮೊಳಕೆ ನೀರಿನಿಂದಲೇ ಹಸಿರು ಹಸಿರಿನಿಂದಲೇ ನೀರು ಎಂಬುದನ್ನು ಮನಗಾಣಬೇಕು. ಇದರ ಬಗ್ಗೆ ಜಾಗೃತಿ ಉಂಟಾದಾಗ ಮಾತ್ರ ಅಂತರ್ಜಲಮಟ್ಟ ಉನ್ನತೀಕರಿಸಲು ಸಾಧ್ಯ ಎಂದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ(ಅಂತರ್ಜಲ) ಎಚ್.ಸಿ. ದಿವಾಕರ್ ಮಾತನಾಡಿ, ಜಿಲ್ಲೆಯಲ್ಲಿ ಮೇಲು ನೀರಿನ ಅಭಾವ ಹೆಚ್ಚಿರುವುದರಿಂದ ನೀರಾವರಿಗೆ ಅಂತರ್ಜಲವನ್ನು ಕೊಳವೆ ಬಾವಿ ಮೂಲಕ ಜನರು ಬಳಸುವುದು ಅನಿವಾರ್ಯವಾಗಿದ್ದು ಬರಗಾಲದ ದಿನಗಳಲ್ಲಿ ಅಗತ್ಯಕ್ಕೆ ಬೇಕಾದ ನೀರನ್ನು ಒದಗಿಸುವ ಮುನ್ನೆಚ್ಚರಿಕೆ ಕಾರ್ಯವನ್ನು ಕೈಗೊಳ್ಳಬೇಕು ಎಂದರು.
ಜಿಲ್ಲಾ ಜಲಾನಯನ ಅಭಿವೃದ್ಧಿಇಲಾಖೆ ಸಹಾಯಕ ಕೃಷಿ ನಿರ್ದೇಶಕ ಎಂ. ಸದಾನಂದ, ಪ್ರಾಂಶುಪಾಲ ಬಿ.ವಿ. ಕೃಷ್ಣ, ಕೇಂದ್ರ ಸರ್ಕಾರದ ದಕ್ಷಿಣ ವಲಯದ ಅಂತರ್ಜಲ ಮಂಡಳಿ ಕೇಂದ್ರೀಯ ಜಲ ಭೂವಿಜ್ಞಾನಿ ವೀಣಾ ಆರ್, ಅಚ್ಚುತಾ, ಅಂತರ್ಜಲ ವೃದ್ಧಿ ಮತ್ತು ಭೂಗೋಳಿಕ ಪರಿಣಾಮಗಳೂ ಸೇರಿದಂತೆ ಇನ್ನಿತರ ಜಲ ಸಂಪನ್ಮೂಲಗಳ ಬಗ್ಗೆ ಉಪನ್ಯಾಸ ನೀಡಿದರು.
ಭೂ ವಿಜ್ಞಾನಿ ವೀರಶೇಖರ್, ವೆಂಕಟರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಎಂ.ಎಸ್. ಆಶಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement