ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಗ್ರಾಮೀಣ ಜನರಿಗೆ ಸಾಲ ಸೌಲಭ್ಯ ನೀಡಿ: ಮುನಿಯಪ್ಪ

Vishwanath S
Updated On : 6 Feb 2014, 12:58 pm

ಮಾಲೂರು: ಗ್ರಾಮೀಣ ಜನರು ಅರ್ಥಿಕ ಸಬಲರಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಯುಪಿಎ ಸರ್ಕಾರ ಗಾಂಧೀಜಿಯವರ ರಾಮ ರಾಜ್ಯದ ಕನಸು ನನಸು ಮಾಡುತ್ತಿದೆ ಎಂದು ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ತಿರುಮಲ ಕಲ್ಯಾಣ ಮಂಟಪದಲ್ಲಿ ಕೆನರಾ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಿದ್ದ ಲೀಡ್ ಬ್ಯಾಂಕ್‌ಗಳ ಗ್ರಾಹಕರ ಮೇಳದಲ್ಲಿ ಸಾಲ ಪತ್ರ ವಿತರಿಸಿ ಮಾತನಾಡಿ, ಯುಪಿಎ ಸರ್ಕಾರ ದೇಶದ ಭವಿಷ್ಯವಾಗಿರುವ ಯುವ ಜನತೆಯ ನಿರೋದ್ಯೋಗದ ಮೇಲೆ ಗಮನಕರಿಸಿ ವರ್ಷಕ್ಕೆ ಒಂದು ಲಕ್ಷ ಯುವಕರಿಗೆ ಸ್ವಾವಲಂಬಿ ಜೀವನ ನಡೆಸಲು ಸಾಲ ನೀಡಿ ಅವರ ಅರ್ಥಿಕ ಮಟ್ಟ ಸುಧಾರಿಸುವ ಕೆಲಸ ಮಾಡುತ್ತಿದೆ ಎಂದರು. ಸರ್ಕಾರದ ಈ ಯೋಜನೆಗಳನ್ನು ಸಕಾಲದಲ್ಲಿ ಅನುಷ್ಠಾನಗೊಳಿಸುತ್ತಿರುವ ಬ್ಯಾಂಕ್‌ಗಳಿಗೆ ಅಭಿನಂದನೆ ಸಲ್ಲಿಸಿದರು.
ಕೆನರಾ ಬ್ಯಾಂಕ್ ಜನರಲ್ ಮೆನೇಜರ್ ಸಂಪತ್ತು ಕುಮಾರ್ ಮಾತನಾಡಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 453 ಮಂದಿಗೆ 10 ಕೋಟಿ ರು.ಸಾಲ ವಿತರಿಸಲಾಗುತ್ತಿದ್ದು, ಕೆನರಾ ಬ್ಯಾಂಕ್ ಮೂಲಕ 8 ಮಂದಿಗೆ 3 ಕೋಟಿ ರು.ಗಳನ್ನು ವಿತರಿಸಲಾಗುತ್ತಿದೆ ಎಂದರು. ಡಿಜಿಎಂ ಸುಧಾಕರ್, ಜಿ.ಎಂ. ದಾಮೋದರ್, ಕಿಶೋರ್ ಮಾತನಾಡಿದರು. ಲೀಡ್ ಬ್ಯಾಂಕಿನ ಶಿವಶಂಕರ್ ರಾವ್, ತಹಸೀಲ್ದಾರ್ ಡಾ. ಸುಧಾಪಾಯ್ಸ್, ಪುರಸಭೆ ಮುಖ್ಯಾಧಿಕಾರಿ ರೇಣುಕಾ, ವೆಂಕಟಮುನಿಯಪ್ಪ, ಕೆನರಾ ಬ್ಯಾಂಕ್‌ನ ಸ್ಥಳೀಯ ಶಾಖೆ ವ್ಯವಸ್ಥಾಪಕಿ ಉಷಾ ಜಯರಾಂ, ನಾಗಮಣಿ, ಕೃಷ್ಣಮೂರ್ತಿ,ನಾರಾಯಣಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement