ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

'ಸಾರ್ವಜನಿಕರ ಸಹಕಾರವಿದ್ದರೆ ಅಭಿವೃದ್ಧಿ ಸಾಧ್ಯ'

Vishwanath S
Updated On : 6 Feb 2014, 12:57 pm

ಶಿಡ್ಲಘಟ್ಟ: ಪಕ್ಷ ಭೇದ ಮರೆತು ಅಧಿಕಾರಿಗಳೊಂದಿಗೆ ಸಾರ್ವಜನಿಕರು ಕೈ ಜೋಡಿಸಿದಾಗ ಮಾತ್ರ ಯೋಜನೆಗಳನ್ನು ಯಶ್ವಸಿಯಾಗಿ ನಿರ್ವಹಿಸಲು ಸಾಧ್ಯ ಎಂದು ಅಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಮಡೊರಾವ್ ಹೇಳಿದರು.
2013-2013 ನೇ ಸಾಲಿನ ಮುಖ್ಯಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರೋತ್ತಾನ ಭಾಗ-2 ಯೋಜನೆಯನ್ನು ಪಟ್ಟಣದ ಆಶ್ರಯ ಬಡಾವಣೆಯಲ್ಲಿ ಉದ್ಘಾಟಿಸಿ ಮಾತನಾಡಿ, ಸರ್ಕಾರದಿಂದ 5 ಕೋಟಿ ರು. ಬಿಡುಗಡೆಯಾಗಿದ್ದು, 4 ಕೋಟಿ ರಸ್ತೆ ಕಾಮಗಾರಿ, ಡಾಂಬರೀಕರಣ ಹಾಗೂ ಮೂಲ ಸೌಲಭ್ಯಗಳಿಗೆ ಬಳಸಿ ಉಳಿದ 1 ಕೋಟಿ ಒಲಚರಂಡಿ ಮಾಡಲು ಉಪಯೋಗಿಸುವುದಾಗಿ ತಿಳಿಸಿದರು.
ಶಿಡ್ಲಘಟ್ಟ ಪುರಸಭೆ ನಗರಸಭೆಯಾಗಿ ಪರಿವರ್ತನೆಯಾಗುತ್ತಿದ್ದು, ಪಟ್ಟಣದ ಅಬಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ಕೊಡುತ್ತಿದೆ. ಶಿಡ್ಲಘಟ್ಟ ರೇಷ್ಮೆ ನಗರಿಯಾಗಿ ಹೆಸರು ವಾಸಿಯಾಗಿದ್ದು, ಪಟ್ಟಣಕ್ಕೆ  60 ಲಕ್ಷ ರು. ವೆಚ್ಚದಲ್ಲಿ ಮಾರುಕಟ್ಟೆಯಲ್ಲಿ 9 ನೇ ಘಟಕ ಉದ್ಘಾಟನೆ ಮಾಡಿರುವುದಾಗಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ 2 ಹೊಸ ಕೊಠಡಿಗಳ ಉದ್ಘಾಟನೆ, ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಿಳಿಸಿದರು. 4 ಕೋಟಿ ವೆಚ್ಚದಲ್ಲಿ ಬಸ್ ಡಿಪೋ ನಿರ್ಮಾಣಕ್ಕಾಗಿ ಸ್ಥಳ ನೋಡಲಾಗಿದೆ. ರಂಗ ಮಂದಿರ, ಕ್ರೀಡಾಂಗಣ ಹಲವು ಯೋಜನೆಗಳಿದ್ದು ಪ್ರಸ್ತಾವನೆ ಮಾಡಿರುವುದಾಗಿ ತಿಳಿಸಿದರು.
ಶಾಸಕ ರಾಜಣ್ಣ ಮಾತನಾಡಿ, ಪಟ್ಟಣ ರೇಷ್ಮೆ ಉದ್ದಿಮೆಯನ್ನು ಅವಲಂಬಿಸಿದ್ದು, ಸರ್ಕಾರ ನೀಡಿದ ಅನುದಾನದಲ್ಲಿ ಮೂಲ ಸೌಕರ್ಯ ಒದಗಿಸುವುದಾಗಿ, ಅಗ್ನಿ ಶಾಮಕ ದಳದ 2 ವಾಹನಗಳನ್ನು ನೀಡಿದ್ದು ಅಗ್ನಿ ಶಾಮಕ ನಿಲ್ದಾಣ ಮಾಡುವುದಾಗಿ ತಿಳಿಸಿದರು. ಜಿಪಂ ಅಧ್ಯಕ್ಷ ಚಿನ್ನಪ್ಪ, ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಪಂ ಅಧ್ಯಕ್ಷ ಯರ್ರಬಚ್ಚಪ್ಪ, ತಹಸೀಲ್ದಾರ್ ನಾರಾಯಣಸ್ವಾಮಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ನಾಗರಾಜಶೆಟ್ಟಿ, ಪುರಸಭಾ ಸದಸ್ಯ ಬಾಲಕೃಷ್ಣ, ಕಿಶನ್, ಅಫ್ಸರ್‌ಪಾಷ, ಆಡಳಿತಾಧಿಕಾರಿ ಶಾಂತಲಾ, ಮುಖ್ಯಾಧಿಕಾರಿ ಚನ್ನರಾಯಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement