ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕುಡಿವ ನೀರಿನ ಸಮಸ್ಯೆ: ಎಚ್ಚರ ವಹಿಸಲು ಸೂಚನೆ

Vishwanath S
Updated On : 7 Feb 2014, 1:09 am

ಶಿಡ್ಲಘಟ್ಟ: ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕೆಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ತಾಪಂ ಸಬಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಯೋಜನೆಗಳಿಗೆ ಯಾವುದೇ ಆರ್ಥಿಕ ತೊಂದರೆ ಇಲ್ಲ. ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆ ಸೇರಿ ಸಮನ್ವಯತೆಯಿಂದ ಕೆಲಸ ಮಾಡಿ ನಿಗದಿತ ಅವದಿಯಲ್ಲಿ ಕಾಮಗಾರಿ ಮುಗಿಸಬೇಕೆಂದರು.
ಜಿಲ್ಲೆಗೆ 24.5 ಕೋಟಿ ಮಂಜೂರು ಮಾಡಲಾಗಿದ್ದು ಪಂಚಾಯತ್ ರಾಜ್, ಲೋಕೋಪಯೋಗಿ ಅಧಿಕಾರಿಗಳು 25 ಕೋಟಿ ಟೆಂಡರ್ ಪ್ರಕ್ತಿಯೆ ಈ ತಿಂಗಳಲ್ಲಿ ಮುಗಿಸಬೇಕೆಂದರು.
ಪ್ರಸಕ್ತ ಸಾಲಿನಲ್ಲಿ ಉಪಯೋವಾಗದ 2 ಕೋಟಿ ರು.ಗಳನ್ನು ಪುರಸಭೆ ಕುಡಿಯುವ ನೀರಿಗೆ ಬಳಸಬೇಕು, ಹೊರವಲಯದ ಬಡಾವಣೆಗಳಲ್ಲಿ ಕಳಪೆ ಕಾಮಗಾರಿ ಮತ್ತು ನಿಗದಿತ ಅವದಿಯಲ್ಲಿ ಯೋಜನಾ ವರದಿ ಸಿದ್ಧಗೂಳಿಸದ ಪುರಸಭಾ ಅಬಿಯಂತರ ಪ್ರಸಾದ್‌ರನ್ನು ಕೂಡಲೇ ವಜಾಗೂಳಿಸಬೇಕೆಂದರು.
ಶಿಕ್ಷಣ ಇಲಾಖೆಯ ರಘುನಾಥ ರೆಡ್ಡಿ ಮಾತನಾಡಿ, ತಾಲೂಕಿನಲ್ಲಿ ಶಿಕ್ಷಕರ ಕೊರತೆ ಇದ್ದು 911 ಶಿಕ್ಷಕರಲ್ಲಿ ವರ್ಗಾವಣೆ ಸೇರಿದಂತೆ ಇತರೆ ಕಾರಣಗಳಿಂದ 176 ಶಿಕ್ಷಕರ ಕೊರತೆ ಇದೆ ಎಂದು ತಿಳಿಸಿದರು. ಶಾಸಕ ರಾಜಣ್ಣ ಮಾತನಾಡಿ, ತಾಲೂಕಿನಲ್ಲಿ ಆಡಳಿತ ಶಾಖೆ ಮಂಜೂರು ಮಾಡಬೇಕೆಂದರು. 4 ಶಾಲೆಗಳಿಗೆ 1.50 ಕೋಟಿ ಬಿಡುಗಡೆಗೂಳಿಸಿದ್ದು ನಿಗದಿತ ಅವದಿಯಲ್ಲಿ ಕಾಮಗಾರಿ ಮುಗಿಸಬೇಕೆಂದು ಸೂಚಿಸಿದರು.
ಸಭೆಯ ವಿಶೇಷಗಳು: ತಾಪಂ ಅಧ್ಯಕ್ಷ ಯರಬಚ್ಚಪ್ಪ, ಜಾನುವಾರುಗಳಿಗೆ ಕುಡಿಯುವ ನೀರು ನೀಡುವಂತೆ ಮನವಿ ಮಾಡಿದರು. ಆರ್ಯೋಗ್ಯ ಇಲಾಖೆಯ ದಂತ ವೈದ್ಯಾದಿಕಾರಿ 3 ವರ್ಷಗಳಿಂದ ಕುರ್ಚಿ ಮತ್ತು ಪ್ರಯೋಗ ಶಾಲೆ ಇಲ್ಲದ ಕಾರಣ ತಾವು ಯಾವುದೇ ಕೆಲಸ ಮಾಡಿಲ್ಲವೆಂದಾಗ ಸಂಬಳ ತೆಗೆದುಕೊಂಡ ಬಗ್ಗೆ ಸಚಿವರು ಕಿಡಿಕಾರಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವಿಶಾಲ್, ಜಿಪಂ ಅಧ್ಯಕ್ಷ ಚಿನ್ನಪ್ಪ, ಶಾಸಕ ರಾಜಣ್ಣ, ಯರಬಚ್ಚಪ್ಪ, ಎಲ್ಲ ಇಲಾಖೆ ಮುಖ್ಯಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement