ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೆಜಿಎಫ್ ಬಂದ್: ಮಿಶ್ರ ಪ್ರತಿಕ್ರಿಯೆ

Vishwanath S
Updated On : 8 Feb 2014, 12:36 pm

ಕೆಜಿಎಫ್: ಕೆಜಿಎಫ್ ತಾಲೂಕು ಕೇಂದ್ರವನ್ನಾಗಿ ಘೋಷಿಸಿಬೇಕು ಹಾಗೂ ಇತರೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ನವ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿದ್ದ ಕೆಜಿಎಫ್ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆಜಿಎಫ್ ನಗರ ಭಾಗದ ಲಕ್ಷಾಂತರ ಜನತೆಯ ಬೇಡಿಕೆಯಾಗಿರುವ ಕೆಜಿಎಫ್‌ನ್ನು ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕು ಎಂದು ಈ ಹಿಂದೆಯೂ ವಿವಿಧ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು ಹಲವಾರು ಹೋರಾಟಗಳನ್ನು ಪ್ರತಿಭಟನೆ ನಡೆಸುತ್ತಾ ಬಂದಿದ್ದು, ಇತ್ತೀಚೆಗೆ ಸರ್ಕಾರ ನೂತನವಾಗಿ 43 ತಾಲೂಕುಗಳನ್ನು ಸೇರ್ಪಡೆ ಮಾಡಿದ್ದು, ಅದರಲ್ಲಿ ಕೆಜಿಎಫ್ ಕೈಬಿಟ್ಟಿರುವುದು ಖಂಡನೀಯ. ಆದ್ದರಿಂದ ಸರ್ಕಾರ ಈ ಕೂಡಲೇ ಕೆಜಿಎಫ್‌ನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ನವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಸ್.ಎನ್.ರಾಜಗೋಪಾಲಗೌಡ ನೇತೃತ್ವದಲ್ಲಿ ನಗರದ ವಿವಿಧ ಸಂಘಟನೆಗಳು ಒಗ್ಗೂಡಿ ಕೆಜಿಎಫ್ ಬಂದ್‌ಗೆ ಕರೆ ನೀಡಿದ್ದವು. ಪ್ರತಿಭಟನೆಯಲ್ಲಿ ಡಿವೈಎಫ್‌ಐ ಮುಖಂಡ ತಂಗರಾಜ್, ಸಿಪಿಎಂ  ಮುಖಂಡ ಅರ್ಜುನನ್, ಡಿಎಸ್‌ಎಸ್ ಸಂಘದ ನರಸಿಂಹ, ಸಮಾಜ ಸೇವಕ ವಳ್ಳಲ್ ಮುನಿಸ್ವಾಮಿ, ಸಮತಾ ಸೈನಿಕ ದಳ ಮುಖಂಡ ಜಯಕುಮಾರ್, ಆಮ್ ಆದ್ಮಿ ಮುಖಂಡ ಎನ್.ಆರ್.ಪುರುಷೋತ್ತಮ ಸೇರಿದಂತೆ ಕರ್ನಾಟಕ ದಲಿತ ಪ್ರಜಾ ಸೇನೆ, ಆಟೋ ಚಾಲಕರ ಸಂಘ, ರಾಷ್ಟ್ರೀಯ ಮಾನವ ಹಕ್ಕುಗಳ ಗ್ರಾಹಕರ ಸಂಘ, ದಲಿತ ರಕ್ಷಣಾ ವೇದಿಕೆ, ಶೇರ್ ಆಟೋ ಸಂಘ, ಹಾಗೂ ಇತರೆ ಸಂಘಗಳ ಮುಖಂಡರು ಬಂದ್‌ನಲ್ಲಿ ಭಾಗವಹಿಸಿದ್ದರು.
ಸಂಚಾರ ಸ್ಥಗಿತ: ಬಂದ್ ಪ್ರಯುಕ್ತ ನಗರದಲ್ಲಿ ಬಸ್, ಆಟೋ, ಶೇರ್ ಆಟೋ ಹಾಗೂ ಇತರೆ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಗಿತ್ತು.
ಚಿನ್ನದಂಗಡಿ, ಎಂ.ಜಿ.ಮಾರುಕಟ್ಟೆ, ಪ್ರೀಚರ್ಡ್ ರಸ್ತೆಯ ಅಂಗಡಿಗಳು, ಉರಿಗಾಂಪೇಟೆ ವರ್ತಕರು ಅಂಗಡಿಗಳನ್ನು ಮುಚ್ಚಿದ್ದರು. ಬ್ಯಾಂಕ್‌ಗಳು, ವಿವಿಧ ಸರ್ಕಾರಿ ಇಲಾಖೆಗಳು ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.
 ದ್ವಿತೀಯ ಪಿಯು ಪರೀಕ್ಷೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಯಾವುದೇ ತೊಂದರೆಯಾಗದಂತೆ ಕೆಜಿಎಫ್ ಎಸ್‌ಪಿ ಡಾ.ರೋಹಿಣಿಕಟೋಚ್ ಸೆಫಟ್ ಎಲ್ಲಾ ರೀತಿಯ ವ್ಯವಸ್ಥೆ ಕೈಗೊಂಡಿದ್ದರು.
ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದೋಬಸ್ತ್ ಮಾಡಲಾಗಿತ್ತು.
ಎಂದಿನಂತೆ: ಕೆಜಿಎಫ್ ನಗರದ ಕೆಲವಡೆ ಬಂದ್ ಬಿಸಿ ಮುಟ್ಟಿದ್ದು ಬಿಟ್ಟರೆ ಉಳಿದಂತೆ ಬೆಮೆಲ್‌ನಗರ ಹಾಗೂ ಬೇತಮಂಗಲ ಗ್ರಾಮದ ಪ್ರದೇಶಗಳಲ್ಲಿ ಆಟೋಗಳು, ಬಸ್‌ಗಳು, ವ್ಯಾಪಾರ ವಹಿವಾಟು, ಶಾಲಾ ಕಾಲೇಜು, ಮಾರುಕಟ್ಟೆ ಎಂದಿನಂತೆ ಕಾರ್ಯನಿರ್ವಹಿಸಿದ್ದವು.
  ಬೆಮೆಲ್ ಕಾರ್ಖಾನೆ, ನ್ಯಾಯಾಲಯ ಕಲಾಪಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement