ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಮು ಹಿಂಸೆ ತಡೆ ಮಸೂದೆಗೆ ವಿರೋಧ

Vishwanath S
Updated On : 8 Feb 2014, 12:35 pm

ಕ.ಪ್ರ. ವಾರ್ತೆ ,  ಕೋಲಾರ ,  ಫೆ 7
ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಿರುವ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ವಿರೋಧಿಸಿ ಕೋಲಾರ ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ಶುಕ್ರವಾರ ಮಧ್ಯಾಹ್ನ ಕೋಲಾರ-ಚಿಕ್ಕಬಳ್ಳಾಪುರ ರೈಲನ್ನು ತಡೆದು ಪ್ರತಿಭಟಿಸಲಾಯಿತು.
ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತಂದರೆ ಒಕ್ಕೂಟದ ವ್ಯವಸ್ಥೆಗೆ ಮಾರಕವಾಗುತ್ತದೆ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರಕ್ಕೆ ಧಕ್ಕೆ ತರುವುದರಿಂದ ಈ ಮಸೂದೆ ಮಂಡನೆಗೆ ಬಿಜೆಪಿ ಅವಕಾಶ ನೀಡುವುದಿಲ್ಲವೆಂದು ಪ್ರತಿಭಟನಾಕಾರರು ತಿಳಿಸಿದರು.
ಮೊದಲು ನದಿ ಜೋಡಣೆಯಾಗಲಿ: ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ನದಿ ಜೋಡಣೆ ಮೂಲಕ ನೀರಿನ ಸಮಸ್ಯೆ ನಿವಾರಣೆಗೆ ಶಾಶ್ವತವಾದ ಪರಿಹಾರ ಸೂತ್ರ ರೂಪಿಸಿದ್ದರು. ಎನ್‌ಡಿಎ ನಂತರ ಬಂದ ಯುಪಿಎ ಇದರ ಕಡೆ ಗಮನ ನೀಡಿಲ್ಲ. ಯುಪಿಎ ಸರ್ಕಾರದ ಕಡೆ ಬಜೆಟ್‌ನಲ್ಲಿಯಾದರೂ ನದಿ ಜೋಡಣೆ ಯೋಜನೆಗೆ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು.
ರೈತರಿಗೆ ಸತತ ಅನ್ಯಾಯ: ರಸಗೊಬ್ಬರ ಖರೀದಿ ಮಾಡುವ ರೈತರಿಗೆ ಸಹಾಯಧನ ನೇರವಾಗಿ ರೈತರ ಕೈ ಸೇರುತ್ತಿಲ್ಲ, ವ್ಯಾಪಾರಿಗಳು ಮೋಸ ಮಾಡುತ್ತಿದ್ದಾರೆ. ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಗೆ ನೇರ ಜಮಾ ಮಾಡಲು ಕ್ರಮ ಕೈಗೊಳ್ಳಬೇಕು, ರೈತರಿಗೆ ಬ್ಯಾಂಕುಗಳಿಂದ ಯಾವುದೇ ರೀತಿಯಲ್ಲೂ ತೊಂದರೆ ಆಗದ ರೀತಿಯಲ್ಲಿ ಸಾಲ ಸಿಗಬೇಕೆಂದು ಆಗ್ರಹಿಸಿದರು.
ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಸ್ಲಂ ಮೋರ್ಚಾ ರಾಜ್ಯ ಕಾರ್ಯದರ್ಶಿ ನೀಲಿ ಜಯಶಂಕರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಮೋದ್, ನಗರಾಧ್ಯಕ್ಷ ಜಯಂತಿ ಲಾಲ್, ಮಹಿಳಾ ಮೋರ್ಚಾದ ಮಂಜುಳ, ಶಕುಂತಲಾ, ಮಮತಾ,ನಗರ ಕಾರ್ಯದರ್ಶಿ ಸುರೇಶ್, ಮುಖಂಡರಾದ ಡಿ.ಆರ್.ನಾಗರಾಜ್, ರತ್ನಮ್ಮ, ತಿಮ್ಮರಾಯಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.
ದೂರು ದಾಖಲು: ರೈಲು ತಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಲ್ವೆ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement