ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ
ಶಿಡ್ಲಘಟ್ಟ: ತಾಲೂಕಿನ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದ ಕ್ರೀಡಾಪಟುಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಲಾಗಿತ್ತು.
ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ರಘುನಾಥರೆಡ್ಡಿ ಅಧ್ಯಕ್ಷತೆಯಲ್ಲಿ ಪ್ರೋತ್ಸಾಹಧನ ವಿತರಿಸಲಾಯಿತು.
ಪತ್ರಾಂಕಿತ ವ್ಯವಸ್ಥಾಪಕರಾದ ಮುನಿಯಪ್ಪ, ಸರಸ್ವತಿ ಕಾನ್ವೆಂಟಟ್ಕಾರ್ಯಧಶರ್ ಎನ್.ಶ್ರೀಕಾಂತ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀನಿವಾಸಪ್ಪ ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ದೈಹಿಕ ಶಿಕ್ಷಣ ಶಿಕ್ಷಕರು ಹಾಜರಿದ್ದರು.
'ತಿಗಳ ಸಮಾಜ ಪ್ರಗತಿಗೆ ಶ್ರಮ'
ಮಾಲೂರು: ರಾಜ್ಯದಲ್ಲಿ 40 ಲಕ್ಷ ಕ್ಕೂ ಹೆಚ್ಚು ಜನಸಂಖ್ಯೆವುಳ್ಳ ತಿಗಳ ಸಮುದಾಯವು ರಾಜಕೀಯದಲ್ಲಿ ನಿರ್ಣಯ ಪಾತ್ರ ವಹಿಸುವ ಶಕ್ತಿ ಇದ್ದರೂ ಇದುವೆರೆಗೂ ಎಲ್ಲ ಕ್ಷೇತ್ರದಲ್ಲಿ ವಿಫಲವಾಗಲು ನಮ್ಮಲ್ಲಿರುವ ಸಂಘಟನೆ ಕೊರತೆ ಕಾರಣ ಎಂದು ಸಮುದಾಯದ ಹಿರಿಯ ಮುಖಂಡ ಸಿ.ಮುನಿಯಪ್ಪ ಹೇಳಿದರು.
ಇಲ್ಲಿನ ಧರ್ಮರಾಯಸ್ವಾಮಿ ದೇವಾಲಯದ ಸಭಾಂಗಣದಲ್ಲಿ ತಾಲೂಕು ತಿಗಳರ ಸಂಘದ ಪದಾಧಿಕಾರಿಗಳ ಚುನಾವಣೆಗಾಗಿ ಅಭ್ಯರ್ಥಿಗಳ ಮತಯಾಚನಾ ಸಭೆಯಲ್ಲಿ ಮಾತನಾಡಿ, ರಾಜ್ಯದ ಹಲವಡೆ ನಮ್ಮ ಸಮುದಾಯವು ರಾಜಕೀಯದಲ್ಲಿ ನಿರ್ಣಯ ಪಾತ್ರ ವಹಿಸುವಂತಹ ಜನಸಂಖ್ಯೆ ಹೊಂದಿದ್ದರೂ ಇದುವರೆಗೂ ರಾಜ್ಯದಲ್ಲಿ ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕ ವಾಗಿ ಮುಂದುವರೆಯಲು ಸಾಧ್ಯವಾಗದಿರುವುದಕ್ಕೆ ನಮ್ಮಲ್ಲಿ ಶಕ್ತಿಯುತವಾದ ಸಂಘಟನೆ ಇಲ್ಲದಿರುವುದೇ ಕಾರಣವಾಗಿದೆ ಎಂದರು.
ಹೊಸಕೋಟೆ ತಾಪಂ ಮಾಜಿ ಅಧ್ಯಕ್ಷ ಸಿ.ಜಯರಾಜ್ ಮಾತನಾಡಿದರು.
ತಾಲೂಕು ತಿಗಳರ ಸಂಘದ ಅಧ್ಯಕ್ಷ ಎಂ.ವಿ.ನಾರಾಯಣಸ್ವಾಮಿ ಮಾತನಾಡಿದರು. ಎಪಿಎಂಸಿ ಉಪಾಧ್ಯಕ್ಷ ಜಿ.ವಿ.ಕುಮಾರ್, ಈಶ್ವರ್, ವೆಂಕಟಸ್ವಾಮಿ, ಕೋಡಹಳ್ಳಿ ವೆಂಕಟೇಶ್,ಅರಳೇರಿ ಕೃಷ್ಣಪ್ಪ, ಗಿರಿಯಪ್ಪ, ಗುರುಸ್ವಾಮಿ, ವಿ.ಶ್ರೀನಿವಾಸ್ ಮತ್ತಿತರರು ಇದ್ದರು.
ದಲ್ಲಾಳಿ-ಹಮಾಲಿಗಳ ಕಿರುಕುಳ ತಡೆಗೆ ಕ್ರಮ
ಚಿಂತಾಮಣಿ: 'ಕನ್ನಡಪ್ರಭ' ವರದಿಗೆ ಸ್ಪಂದಿಸಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹಾಗೂ ಹಮಾಲಿಗಳ ಕಿರುಕುಳ ತಪ್ಪಿಸಲು ಆಡಳಿತ ಸಮಿತಿ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಾಟದ ಅವಕಾಶವನ್ನು ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಕಲ್ಪಿಸಿಕೊಟ್ಟಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣದ ಹೊರ ಮತ್ತು ಒಳ ಭಾಗಗಳಲ್ಲಿ ಹಲವು ಹಮಾಲಿಗಳು ಹಾಗೂ ದಲ್ಲಾಳಿಗಳು ಸೇರಿ ರೈತರು ಬೆಳೆದು ತರುವ ದವಸ-ಧಾನ್ಯಗಳನ್ನು ದೌರ್ಜನ್ಯದಿಂದ ಕಿತ್ತುಕೊಂಡು ಹೋಗುವ ಬಗ್ಗೆ 'ಕನ್ನಡಪ್ರಭ' ಫೆ.1 ರಂದು ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಎಪಿಎಂಸಿ ಅಧ್ಯಕ್ಷ ಎಸ್.ವಿ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಬೆಳೆದ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಪ್ರಾಂಗಣದಲ್ಲಿರುವ ಯಾವುದೇ ದಲ್ಲಾಳಿ ಅಥವಾ ಹಮಾಲಿಗಳ ಕಿರುಕುಳವನ್ನು ತಪ್ಪಿಸಲು ಸಭೆಯಲ್ಲಿ ರೈತರು ಮುಕ್ತವಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಮಾರಾಟ ಮಾಡಿಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಕ್ರಮ ಮದ್ಯ ವಶ: ವ್ಯಕ್ತಿ ಬಂಧನ
ಕೆಜಿಎಫ್: ವ್ಯಕ್ತಿಯೊಬ್ಬ ಯಾವುದೇ ಪರವಾನಗಿ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಮದ್ಯದ ಸಾಗಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೇತಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೇತಮಂಗಲ ಗ್ರಾಮದ ವ್ಯಾಪ್ತಿಯ ಗೋಪೇನಹಳ್ಳಿ ಗ್ರಾಮದ ನಿವಾಸಿ ಗೋಪಿ ಎಂಬುವರು ರಾಮಸಾಗರ ರಸ್ತೆಯ ಮಾರ್ಗವಾಗಿ ಅಕ್ರಮವಾಗಿ ಮದ್ಯದ ಬಾಟಲೀಗಳನ್ನು ಸಾಗಿಸುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಬೇತಮಂಗಲ ಪೊಲೀಸರು ದಾಳಿ ನಡೆಸಿ ಆರೋಪಿ ಗೋಪಿಯನ್ನು ಬಂಧಿಸಿ ಆತನ ಬಳಿಯಿದ್ದ ಎರಡು ಕೇಸ್ ಮದ್ಯದ ಬಾಟಲಿಗಳು, ಪ್ಯಾಕೆಟ್ಗಳು ಹಾಗೂ ಬೀರ್ ಬಾಟಲಿಗಳನ್ನು ವಶಪಡಿಸಿಕೊಂಡ ಬೇತಮಂಗಲ ಗ್ರಾಮದ ಪೊಲೀಸರು ಪ್ರಕರಣದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿರೂಪಾಕ್ಷೇಶ್ವರ ಬ್ರಹ್ಮರಥೋತ್ಸವ
ಮುಳಬಾಗಲು: ತಾಲೂಕಿನ ವಿರೂಪಾಕ್ಷಿ ಗ್ರಾಮದ ವಿರೂಪಾಕ್ಷೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು. ಶಾಸಕ ಕೊತ್ತೂರು ಮಂಜುನಾಥ್ ಜಾತ್ರೆಗೆ ಚಾಲನೆ ನೀಡಿ, ಜಾತ್ರೆಗಳು ದೇಶದ ಸಂಸ್ಕೃತಿಯ ಪ್ರತೀಕಗಳಾಗಿದ್ದು, ಭಕ್ತಿ ಪರಂಪರೆಯ ಒಂದು ಭಾಗವಾಗಿದೆ ಎಂದರು. ತಾಲೂಕಿನಲ್ಲಿ ನಡೆಯುವ ಎಲ್ಲಾ ಜಾತ್ರೆಗಳಿಗೂ ಮೂಲ ಸೌಕರ್ಯ ಒದಗಿಸುವುದಾಗಿ ನುಡಿದರು.ತಹಸೀಲ್ದಾರ್ ಸೋಮಶೇಖರಯ್ಯ, ಕಂದಾಯ ನಿರೀಕ್ಷಕ ಬಲರಾಮೇಗೌಡ. ಮುಖಂಡರಾದ ಕಲ್ಲುಪಲ್ಲಿ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
ಉಚಿತ ಆರೋಗ್ಯ ತಪಾಸಣಾ ಶಿಬಿರ
ಶಿಡ್ಲಘಟ್ಟ: ಪುರಸಭೆ ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಪಟ್ಟಣ ವ್ಯಾಪ್ತಿಯ ಪರಿಶಿಷ್ಟ ಜಾತಿ, ಪಂಗಡ, ಅಂಗವಿಕಲ ಮತ್ತು ಇತರೆ ಬಡಜನರಿಗೆ ಹಾಗೂ ಹಿಂದುಳಿದ ಹಾಸ್ಟೆಲ್ ದ್ಯಾಥರ್ಗಳಿಗೆ ಪುರಸಭೆ ಯೋಜನೆಯಡಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಾಸಕ ರಾಜಣ್ಣ ಮಾತನಾಡಿ, ಮನುಷ್ಯನಿಗೆ ಆರೋಗ್ಯವಿದ್ದರೆ ಎಲ್ಲ ಇದ್ದಂತೆ, ಸರ್ಕಾರಿ ವೈದ್ಯರು, ಸಿಬ್ಬಂದಿ ಸ್ವಯಂ ಪ್ರೇರಿತರಾಗಿ ಬಡಾವಣೆಗಳಲ್ಲಿ ಬಂದು ಬಡರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂದು ತಿಳಿಸಿದರು. ವೈದ್ಯಕೀಯ ಶಿಬಿರದಲ್ಲಿ ಡಯಾಬಿಟಿಸ್, ರಕ್ತದ ಒತ್ತಡ, ಚರ್ಮ ರೋಗ, ಮುಂತಾದ ಕಾಯಿಲೆ ಪರಿಶೀಲಿಸಿ ರೋಗಿಗಳಿಗೆ ಉಚಿತ ಔಷಧಿ ವಿತರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಚೆನ್ನರಾಯಪ್ಪ, ಆಡಳಿತ ವೈದ್ಯಾದಿಕಾರಿ ಅಂಬರೀಷ್ಗದ್ದಿ. ವೈದ್ಯಾಧಿಕಾರಿ ಅನಿಲ್ಕುಮಾರ್, ಆಸ್ಪತ್ರೆಯ ಸಿಬ್ಬಂದಿ, ಪುರಸಭೆಯ ಸಿಬ್ಬಂದಿ, ಪುರಸಭೆಯ ಸದಸ್ಯರು ಮತ್ತಿತರರು ಇದ್ದರು.
'ಮಾಲೂರು ಸಮಗ್ರ ಅಭಿವೃದ್ಧಿಗೆ ಬದ್ಧ'
ಮಾಲೂರು: ಸಣ್ಣ ವಯಸ್ಸಿನಲ್ಲೇ ಶಾಸಕನಾಗುವ ಅವಕಾಶ ನೀಡಿ ಆಶೀರ್ವಾದ ಮಾಡಿರುವ ಕ್ಷೇತ್ರದ ಜನತೆ ಒಳತಿಗಾಗಿ ನನ್ನ ಅಧಿಕಾರದಾವಧಿ ಮೀಸಲಿಡುವೆ ಎಂದು ಶಾಸಕ ಕೆ.ಎಸ್.ಮಂಜುನಾಥ್ಗೌಡ ಹೇಳಿದರು. ಇಲ್ಲಿನ ಮಿನಿ ವಿಧಾನಸೌಧದ ಮೇಲಿನ ಮಹಡಿಯಲ್ಲಿ ನಿರ್ಮಿಸಲಾಗಿದ್ದ ಶಾಸಕರ ಕಚೇರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಮಾತನಾಡುತ್ತ ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿರುವ ನನಗೆ ಕ್ಷೇತ್ರದಲ್ಲಿನ ಭ್ರಷ್ಠಾಚಾರ ಕಡಿಮೆ ಮಾಡುವ ನನ್ನ ಪ್ರಯತ್ನ ಸ್ಪಲ್ಪ ಹಿನ್ನೆಡೆಯಾದರೂ ಸಾರ್ವಜನಿಕರ ಸಹಕಾರದಲ್ಲಿ ಭ್ರಷ್ಟಚಾರವನ್ನು ಹತ್ತಿಕ್ಕೂವ ಭರವಸೆ ಇದೆ.ಮತದಾರ ಬಂಧುಗಳ ಸಮಸ್ಯೆ ಆಲಿಸಿ ಪರಿಹಾರ ನೀಡಲು ವಾರಕ್ಕೂಂದು ದಿನ ಸಂಪೂರ್ಣವಾಗಿ ಈ ನೊತನ ಕ:ಕೇರಿಯಲ್ಲಿರುವ ನಿರ್ಧರಿಸಲಾಗಿದ್ದು,ಜನತೆ ತಮ್ಮ ಹಕ್ಕುವಿನಲ್ಲಿ ಯಾವೂದೇ ಸಮಸ್ಯೆ ಕಾಡಿದರು ನನ್ನನ್ನು ಭೇಟಿ ಮಾಡಿ ಎಂದರು.
ಶಾಸಕರ ಪತ್ನಿ ಅರಿದ್ರಾ ಮಂಜುನಾಥ್, ತಹಸೀಲ್ದಾರ್ ಡಾ.ಸುಧಾ ಪಾಯ್ಸ್, ಮುಖ್ಯಾಧಿಕಾರಿ ರೇಣುಕಾ, ಜಿಪಂ ಮಾಜಿ ಸದಸ್ಯ ಹನುಮಂತಪ್ಪ, ಹಿರಿಯ ಮುಖಂಡ ಕೋಡಿಹಳ್ಳಿ ಸೂಣ್ಣಪ್ಪ, ಪುರಸಭೆ ಸದಸ್ಯರಾದ ಅಲೂಮಂಜು, ಪಚ್ಚಪ್ಪ, ಮಾಲಾದ್ರಿ, ಮುಖಂಡರಾದ ರಾಮಚಂದ್ರ, ಪ್ರದೀಪ್ರೆಡ್ಡಿ, ಮಂಜುನಾಥ್ ಮತ್ತಿತರರು ಇದ್ದರು.
ನಗ, ನಾಣ್ಯ ಅಪಹರಣ
ಮಾಲೂರು: ಅಗುಂತಕನ ಮಾತು ನಂಬಿ ಮಹಿಳೆಯೊಬ್ಬರು ತನ್ನ ಮಾಂಗಲ್ಯ ಹಾಗೂ ಮಗಳ ಚಿನ್ನದ ಸರ ಸೇರಿದಂತೆ ರು.4 ಲಕ್ಷ ಕಳೆದುಕೊಂಡ ಘಟನೆ ಪಟ್ಟಣದ ಮಾರಿಕಾಂಭ ದೇವಾಲಯದ ಎದರು ಮನೆಯಲ್ಲಿ ಶುಕ್ರವಾರ ನಡೆದಿದೆ. ಮೋಸ ಹೋದವರು ನಿವೃತ್ತ ಪೊಲೀಸ್ ಅಧಿಕಾರಿ ಕೃಷ್ಣಪ್ಪ ಪತ್ನಿ ಪುಪ್ಬಮ್ಮ, ಆಕೆಯ ಮಗಳು ಭಾರತಿ. ಕಳೆದುಕೊಂಡ ಚಿನ್ನದ ತೂಕ 138 ಗ್ರಾಂ. ಅಪರಿಚಿತ ಮಹಿಳೆಯೊಬ್ಬಳು ಪುಪ್ಬಮ್ಮಳ ಬಳಿ ಬಂದು ಪೂಜಾರಿಯೊಬ್ಬನನ್ನು ಪರಿಚಯಿಸಿದ್ದಾಳೆ. ಆತ ಲಕ್ಷ್ಮಿ ಪೂಜೆ ಮಾಡಿದರೆ ಒಳ್ಳೆದಾಗಲಿದೆ ಎಂದು ಅತ ನಂಬಿಸಿದ್ದಾನೆ. ತನ್ನ ಮಾಂಗಲ್ಯ, ತಮ್ಮ ಬಳಿ ಇದ್ದ ಚಿನ್ನ ಕೊಟ್ಟಿದ್ದಾರೆ ಅವನು ಅಪಹರಿಸಿ ಪರಾರಿಯಾಗಿದ್ದಾನೆ.