ಲಾರಿ ಅಪಹರಣ ಯತ್ನ: ನಾಲ್ಕು ಆರೋಪಿಗಳ ಸೆರೆ
ಚಿಂತಾಮಣಿ: ಸರಕು ಸಾಕಾಣಿಕೆ ಲಾರಿ ಅಪಹರಿಸಲು ಯತ್ನಿಸಿ, ತಲೆಮರೆಸಿಕೊಂಡಿದ್ದ ಪ್ರಮುಖ 3 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ: ತಾಲೂಕಿನ ಚಿಂತಾಮಣಿ-ಬೆಂಗಳೂರು ಮುಖ್ಯರಸ್ತೆಯ ಸಂತೇಕಲ್ಲಹಳ್ಳಿ ಕ್ರಾಸ್ ಬಳಿ ಫೆ.2 ರಂದು ಬೆಳಗಿನ ಜಾವ ಆಂಧ್ರದ ಕಡಪ ಜಿಲ್ಲೆಗೆ ಸೇರಿದ ಇಂದೂರಿನಿಂದ ಬಾಳೆ ಹಣ್ಣನ್ನು ಬೆಂಗಳೂರು ಮಾರುಕಟ್ಟೆಗೆ ಹೋಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿ ಬಂದ ನಾಲ್ಕು ಜನರ ಗುಂಪು ಚಾಲಕನನ್ನು ಹಿಡಿದು ಹಲ್ಲೆ ಮಾಡಿ ಮಾರಕಾಸ್ತ್ರ ತೋರಿಸಿ ಲಾರಿ ಅಪಹರಿಸಲು ಯತ್ನಿಸಿದಾಗ ಸ್ಥಳೀಯ ಪೊಲೀಸರು ಚಾಲಕ ಚೆನ್ನಾರೆಡ್ಡಿ ನೀಡಿದ ಮಾಹಿತಿ ಮೇರೆಗೆ ಸ್ಥಳದಲ್ಲೇ ಸಿಕ್ಕಿ ಬಿದ್ದ ರಮೇಶ ಸುಳಿವಿನ ಮೇರೆಗೆ ಪೊಲೀಸರು ಕಾರ್ಯಾಚರಣೆ
ಆರಂಭಿಸಿದ್ದರು.
ನಾಲ್ವರು ಆರೋಪಿಗಳ ಸೆರೆ: ಡಿವೈಎಸ್‌ಪಿ ಸಣ್ಣತಿಮ್ಮಪ್ಪ ಮಾರ್ಗದರ್ಶನದಲ್ಲಿ ಕಳೆದ ಹಲವು ದಿನಗಳಿಂದ ಸ್ಥಳೀಯ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ ಪರಿಣಾಮ, ಶುಕ್ರವಾರ
ಬೆಳಗ್ಗೆ ಚಿಂತಾಮಣಿ ತಾಲೂಕಿನ ಸಂತೇಕಲ್ಲಹಳ್ಳಿ ಗ್ರಾಮದ ಸೋಮಶೇಖರ್, ವೆಂಕಟರೆಡ್ಡಿ, ಮಂಜುನಾಥ್, ದಿವಾಕರ್ ಈ ನಾಲ್ಕು ಜನ ಅನುಮಾನಸ್ಪದವಾಗಿ ಹೊಸಕೋಟೆ ತಾಲೂಕು ಮಲ್ಲಿಮಾಕನಪುರ ಗ್ರಾಮದ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿದ್ದಾಗ ಇವರ ಬಗ್ಗೆ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕರ ವೆಂಕಟೇಶಮೂರ್ತಿ ಅನುಮಾನಗೊಂಡು ಚಲನವಲನಗಳನ್ನು ಗಮನಿಸಿ ವಿಚಾರಿಸಿದಾಗ ಲಾರಿ ಅಪಹರಣ ಬಗ್ಗೆ ಬಾಯಿಬಿಟ್ಟಿರುವುದಾಗಿ ಪೊಲೀಸರ ವಿಚಾರಣೆ ವೇಳೆಯಲ್ಲಿ ಬಂದಿತ ಆರೋಪಿಗಳು ನಡೆದ ಘಟನೆ ಬಗ್ಗೆ ತಿಳಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಕೇಸು ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.