ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬೀದಿ ನಾಯಿಗಳ ದಾಳಿ: 10 ಮಂದಿಗೆ ಗಾಯ

Vishwanath S
Updated On : 14 Feb 2014, 12:32 pm

ಚಿಂತಾಮಣಿ: ನಗರದ ಜೆ.ಜೆ. ಕಾಲೋನಿಯಲ್ಲಿ ಬೀದಿ ನಾಯಿಗಳ ದಾಳಿಗೆ 10 ಮಂದಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ.
ನಗರದ ರೇಲ್ವೆ ಸ್ಟೇಶನ್ ರಸ್ತೆ ಬಳಿ ಇರುವ ಜೆ.ಜೆ. ಕಾಲೋನಿ ನಿವಾಸಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿದ ಪರಿಣಾಮ ಸಂದೇಶ್, ಗಗನ್, ಮಂಜುನಾಥ್, ಯರ್ರಮ್ಮ, ಸುಮನ್, ನಾರಾಯಣಸ್ವಾಮಿ ಸೇರಿದಂತೆ ಇನ್ನೂ ಹಲವರು ತೀವ್ರ ಗಾಯಗಳಾಗಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ನಗರಸಭೆ ವಿಫಲಗೊಂಡಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ಹಲವು ಬೀದಿ ನಾಯಿಗಳಿಗೆ ಹುಚ್ಚು ಹಿಡಿದು ಜನಗಳ ಮೇಲೆ ದಾಳಿ ನಡೆಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಮೌನವಾಗಿರುವುದರಿಂದ ಅಧಿಕಾರಿಗಳ ವಿರುದ್ಧ ನಾಗರಿಕರು ಕಿಡಿ ಕಾರಿದ್ದಾರೆ.
ಬಸ್ ಬ್ಯಾಟರಿ ಕಳವು
ಕೆಜಿಎಫ್: ಎರಡು ಖಾಸಗಿ ಬಸ್‌ಗಳಲ್ಲಿ ಅಳವಡಿಸಿದ್ದ ನಾಲ್ಕು ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ರಾಬರ್ಟ್‌ಸನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿಲಿಲಸಿದ್ದ ಬಸ್‌ಗಳಿಂದ ಸುಮಾರು 20 ಸಾವಿರ ಬೆಲೆ ಬಾಳುವ ನಾಲ್ಕು ಬ್ಯಾಟರಿಗಳನ್ನು ಕಳವು ಮಾಡಿರುವುದಾಗಿ ರಾಮಚಂದ್ರ ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಕಲಿ ಕೀ ಬಳಸಿ ಕಳವು
ಮುಳಬಾಗಲು: ಎಂ.ಸಿ. ರಸ್ತೆ ಸೋಮೇಶ್ವರಪಾಳ್ಯ ಸಮೀಪದ ಎಸ್ಪಿ ಕಾಂಪ್ಲೆಕ್ಸ್‌ನ ಮಿಮಾ ಕೇಂದ್ರದಲ್ಲಿರುವ ಗ್ರೀನ್ ಬರ್ಡ್  ಅಗ್ರೋಫಾರಂ, ಪ್ರಭಾಸ್ ರೈಸ್ ಕಾರ್ನರ್ ಅಂಗಡಿಗಳ ನಕಲಿ ಕೀ ಬಳಸಿ ಕಳವು ಮಾಡಿರುವ ಘಟನೆ ಬುಧವಾರ ವರದಿಯಾಗಿದೆ. ಮಂಗಳವಾರ ರಾತ್ರಿ ನುಗ್ಗಿದ ಕಳ್ಳರು 3 ಲಕ್ಷ 6 ಸಾವಿ ರು.ನಗದು ದೋಚಿದ್ದಾರೆ, ಅಲ್ಮೆರಾ ಮುರಿದು ಕನ್ನಡ ಮಿತ್ರ ವೆಂಕಟಪ್ಪ ಅವರಿಗೆ ಸೇರಿದ 1 ಲಕ್ಷ ಮೂರು ಸಾವಿರ ರು., ಪ್ರಭಾಸ್ ರೈಸ್ ಕಾರ್ನರ್‌ನಲ್ಲಿದ್ದ ಮೂರು ಸಾವಿರ ರು. ದೋಚಿದ್ದಾರೆ. ಗ್ರೀನ್ ಬಡ್ಸ್ ಅಗ್ರೋ ಫಾರಂ ಒಂದು ವರ್ಷದಿಂದ ಯಾವ ಸಾಮಾಗ್ರಿ ಕಳುವಾಗಿದೆ ಎಂಬ ಮಾಹಿತಿ ತಿಳಿದಿಲ್ಲ. ಜಿಲ್ಲಾ ಹೆಚ್ಚುವರಿ  ಐ.ಎಂ. ಜಿಮೀಲ್, ಡಿವೈಎಸ್ಪಿ ಟಿ. ಸಿದ್ದಪ್ಪ ಮತ್ತು ಸಿಬ್ಬಂದಿ ಸ್ದಳ ತನಿಖೆ ನಡೆಸಿದರು. ಕೋಲಾರದಿಂದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದರು.
ಆಟೋ ಅಪಘಾತ: ವೃದ್ಧೆ ಸಾವು
ಗುಡಿಬಂಡೆ: ತಾಲೂಕಿನ ಬಂದಾರ್ಲಹಳ್ಳಿ ಕ್ರಾಸ್ ಬಳಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಆಟೋದಲ್ಲಿ ಪ್ರಯಾಣಿಸುತ್ತಿದ್ದ  ದಂಪತಿಗಳಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ತಾಲೂಕಿನ ದಪ್ಪರ್ತಿ ಗ್ರಾಮದ ನಾರಾಯಣಮ್ಮ(65) ಮೃತ ದುರ್ದೈವಿ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ನಾರಾಯಣಮ್ಮ ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಸಂಜೀವಪ್ಪ ಗಂಭೀರ ಗಾಯಗಳಾಗಿದ್ದು ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಚೆನ್ನಾಗಿಲ್ಲದ ಕಾರಣ ಈ ದಂಪತಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋಗಲು ಅದೇ ಗ್ರಾಮದ ಆಟೋದಲ್ಲಿ ಪ್ರಯಾಣಿಸುತ್ತಿದ್ದಾಗ ಬಂದಾರ್ಲಹಳ್ಳಿ ಕ್ರಾಸ್ ಬಳಿ ಶಾಲಾ ಮಕ್ಕಳ ಸೈಕಲ್ ಅಡ್ಡ ಬಂದಿದ್ದರಿಂದ ಅದನ್ನು ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ  ಮಗುಚಿ ಬಿದ್ದು ಈ ಅವಘಡ ಸಂಭವಿಸಿದೆ ಎಂದು ಸಬ್ ಇನ್ಸೆಪೆಕ್ಟರ್ ನರಸಿಂಹ ಮೂರ್ತಿ ತಿಳಿಸಿದ್ದಾರೆ. ಆಟೋ ಚಾಲಕ ಪರಾರಿಯಾಗಿದ್ದಾನೆ. ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement