ರೆಡ್ಕ್ರಾಸ್ ಸಭೆಗಳಿಗೆ ತಪ್ಪದೇ ಹಾಜರಾಗಿ
ಗುಡಿಬಂಡೆ: ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ್ನ ಬಿಟ್ಟು ರೆಡ್ಕ್ರಾಸ್ ಸಂಸ್ಥೆಯಂತಹ ಉನ್ನತ ಉದ್ದೇಶಗಳನ್ನುವುಳ್ಳ ಸಂಸ್ಥೆಯೊಂದಿಗೆ ಪ್ರತಿಯೊಬ್ಬ ತಾಲೂಕು ಮಟ್ಟದ ಅಧಿಕಾರಿ ಕೆಲಸ ಮಾಡಬೇಕು, ಈ ನಿಟ್ಟಿನಲ್ಲಿ ಅಧಿಕಾರಿಗಳು ರೆಡ್ ಕ್ರಾಸ್ ಸಭೆಗಳಿಗೆ ಗೈರುಹಾಜರಾಗದೇ ತಪ್ಪದೇ ಹಾಜರಾಗಬೇಕೆಂದು ತಹಶೀಲ್ದಾರ್ ಎಸ್. ಶೈಲಜಾ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ನಡೆದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲೂಕು ಶಾಖಾ ತ್ರೈಮಾಸಿಕ ಸಭೆ ಮತ್ತು ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಭೆಗಳಿಗೆ ಬೆರಳಣಿಕೆಯಷ್ಟು ಅಧಿಕಾರಿಗಳು ಮತ್ತು ರೆಡ್ಕ್ರಾಸ್ ವ್ಯವಸ್ಥಾಪಕ ಮಂಡಳಿ ಸದಸ್ಯರು ಆಗಮಿಸಿರುವುದು ಅವರಲ್ಲಿನ ಬೇಜವಬ್ದಾರಿ ತನವನ್ನು ತೋರುತ್ತಿದೆ, ಇಂತಹ ಅಧಿಕಾರಿ ಮತ್ತು ಪದಾಧಿಕಾರಿಗಳಿಗೆ ನೋಟಿಸ್ ನೀಡಿ, ಮುಂದಿನ ದಿನಗಳಲ್ಲಿ ಇದೇ ರೀತಿಯ ವರ್ತನೆ ಮುಂದುವರೆದರೆ ಯಾವುದೇ ಕ್ರಮಕ್ಕೆ ಹಿಂಜರಿಯುವುದಿಲ್ಲ.
ಜಿಲ್ಲಾ ಕಾರ್ಯದರ್ಶಿ ನಾರಾಯಣಚಾರ್ಯ ಮಾತನಾಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ರೆಡ್ಕ್ರಾಸ್ ಚಟುವಟಿಕೆ ಮತ್ತು ಪ್ರಗತಿ ವಿಚಾರದಲ್ಲಿ ಸಹಕರಿಸದೆ ಬೇಜವಬ್ದಾರಿ ತೋರಿರುವುದು, ಗ್ರಾಮೀಣ ಜನತೆಗೆ ಸೇವೆ ಸಲ್ಲಿಸುತ್ತಿರುವ ರೆಡ್ಕ್ರಾಸ್ ಸಂಸ್ಥೆ ಸೇವೆಯನ್ನು ಹೆಚ್ಚಿಸಲು ತಾಲೂಕಿನ ಅಧಿಕಾರಿಗಳು ಮುಂದಾಗಬೇಕು ಎಂದರು.
ತಾಲೂಕು ಶಾಖೆಯ ಮಹಾ ಪೋಷಕರಾಗಿ ರೆಡ್ಕ್ರಾಸ್ ಸಂಸ್ಥೆಗೆ 20 ಸಾವಿರ ರು. ದೇಣಿಗೆ ನೀಡಿದ ಜಂಬಿಗೇಮರದಹಳ್ಳಿ ಗ್ರಾಮದ ಕೆ. ನರಸಿಂಹಪ್ಪರನ್ನು ಸನ್ಮಾನಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನರಸಿಂಹಮೂರ್ತಿ, ಸಿದ್ದಲಿಂಗಪ್ಪ, ರವಿಕುಮಾರ್, ಪ.ಪಂ ಮುಖ್ಯಾಧಿಕಾರಿ ಶ್ರೀರಾಮಪ್ಪ, ಕೆ.ವಿ. ನಾರಾಯಣಸ್ವಾಮಿ, ಮುನಿಕೃಷ್ಣ, ಜಿ.ವಿ. ವಿಶ್ವನಾಥ್, ಎಲ್. ನಾಗರಾಜ್, ಶಂಕರಪ್ಪ, ಅಧ್ಯಕ್ಷ ವೆಂಕಟೇಶಪ್ಪ ಮತ್ತಿತರರು ಇದ್ದರು.