ಜೆಡಿಎಸ್ಗೆ ಮರಳುವ ಪ್ರಶ್ನೆಯೇ ಇಲ್ಲ: ನಾಗರಾಜರೆಡ್ಡಿ ಸ್ಪಷ್ಟನೆ
ಬಾಗೇಪಲ್ಲಿ: ಯಾವುದೇ ಕಾರಣಕ್ಕೂ ನಾನು ಜೆಡಿಎಸ್ಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ಮಾಜಿ ಅಧ್ಯಕ್ಷ ಡಿ.ಜೆ. ನಾಗರಾಜರೆಡ್ಡಿ ಸ್ಪಷ್ಟಪಡಿಸಿದರು.
ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಗಾಳಿಯೇ ಈ ಕ್ಷೇತ್ರದಲ್ಲಿ ಇರಲಿಲ್ಲ. ಅಂತಹ ಸಮಯದಲ್ಲಿ ನಾನು ಜೆಡಿಎಸ್ನ್ನು ಕಟ್ಟಿ ಬೆಳೆಸಿದೆ. ಆದರೆ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೊನೆಗಳಿಗೆಯವರಿಗೂ ಟಿಕೆಟಟ್ನೀಡುವುದಾಗಿ ನಂಬಿಸಿ ವಂಚನೆ ಮಾಡುವ ಮೂಲಕ ನನ್ನನ್ನು ಬಲಿಪಶುವನ್ನಾಗಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷಕ್ಕೆ ನೆಲೆಯಿಲ್ಲದಂತಹ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕುಗಳ ಗ್ರಾ.ಪಂ ಮತ್ತು ತಾ.ಪಂ, ಜಿ.ಪಂ, ಸಹಕಾರ ಸಂಘಗಳಲ್ಲಿ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಜೆಡಿಎಸ್ ಸದಸ್ಯರ ಗೆಲುವಿಗಾಗಿ ಶ್ರಮಿಸಿದ್ದೇನೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳ ಪ್ರಾಬಲ್ಯ ಹೆಚ್ಚಾಗಿದ್ದರೂ ನನ್ನ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ಶ್ರಮದಿಂದ ಈ ಎರಡು ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಜೆಡಿಎಸ್ನ್ನು ಸದೃಢವಾಗಿ ಸಂಘಟಿಸಲಾಗಿತ್ತು ಎಂದರು.
ತಂದೆ ಮಗ ಮಾಡಿದ ನಂಬಿಕೆ ದ್ರೋಹದಿಂದ ನಾನು ವಿಧಾನಸಭೆಯ ಚುನಾವಣೆಯ ಕಣದಿಂದ ಹಾಗೂ ಜೆಡಿಎಸ್ ಪಕ್ಷದಿಂದಲೇ ದೂರ ಸರಿಯಬೇಕಾಯಿತು. ಕಳೆದ ಸುಮಾರು ವರ್ಷಗಳಿಂದ ನನ್ನನ್ನೇ ನಂಬಿಕೊಂಡಿರುವಂತಹ ಪ್ರಾಮಾಣಿಕವಾಗಿ ನನ್ನ ಶ್ರೇಯಸ್ಸಿಗಾಗಿ ದುಡಿದಿರುವ ಬೆಂಬಲಿಗರನ್ನು ಹಾಗೂ ಕಾರ್ಯಕರ್ತರ ಕೈ ಎಂದಿಗೂ ಬಿಡುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಿ.ವಿ. ರಾಮಿರೆಡ್ಡಿ, ಬೈಪರೆಡ್ಡಿ, ಪಿ.ಎಲ್. ಗಣೇಶ್, ಪಿ.ವಿ.ಶ್ರೀರಾಮರೆಡ್ಡಿ, ನಾಗರಾಜು, ಆದಿನಾರಾಯಣರೆಡ್ಡಿ, ಗಿರೀಶ್ ಬಾ ಬು, ಮಲ್ಲಪ್ಪ, ನಾಗಿರೆಡ್ಡಿ, ಗೂಳೂರು ಬಾಬು, ರಾಮಿರೆಡ್ಡಿ, ವೆಂಕಟರೆಡ್ಡಿ, ನಾರಾಯಣನಾಯ್ಕ್, ಮುತ್ಯಾಲಪ್ಪ ಇದ್ದರು.
ಜೆಡಿಎಸ್ ಗಾಳಿಯೇ ಈ ಕ್ಷೇತ್ರದಲ್ಲಿ ಇರಲಿಲ್ಲ. ಅಂತಹ ಸಮಯದಲ್ಲಿ ನಾನು ಜೆಡಿಎಸ್ನ್ನು ಕಟ್ಟಿ ಬೆಳೆಸಿದೆ. ಆದರೆ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೊನೆಗಳಿಗೆಯವರಿಗೂ ಟಿಕೆಟಟ್ನೀಡುವುದಾಗಿ ನಂಬಿಸಿ ವಂಚನೆ ಮಾಡುವ ಮೂಲಕ ನನ್ನನ್ನು ಬಲಿಪಶುವನ್ನಾಗಿಸಿದರು
ಟಿ ಡಿ.ಜೆ. ನಾಗರಾಜರೆಡ್ಡಿ ಜೆಡಿಎಸ್ ಮಾಜಿ ಅಧ್ಯಕ್ಷ
ಮೂಲ ಸೌಕರ್ಯಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
ಚಿಂತಾಮಣಿ: ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಎಬಿವಿಪಿ ವಿದ್ಯಾರ್ಥಿಗಳು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಕೊಠಡಿ, ಶೌಚಾಲಯ, ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ ಸೇರಿದಂತೆ ಹಲವು ಸಮಸ್ಯೆಗಳು ತಾಂಡವಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಸಮಸ್ಯೆಯಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನಗಳು ಕುಂಠಿತಗೊಂಡಿದೆ. ಪದವಿ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ನೇಮಕಾತಿ ಆಗದೆ ಅತಿಥಿ ಉಪನ್ಯಾಸಕರ ಮೂಲಕ ಪಾಠ ಪ್ರವಚನಗಳು ನಡೆಯುತ್ತಿವೆಯಾದರೂ ಸಮರ್ಪಕ ವೇತನ ನೀಡದೇ ಬಹುತೇಕ ಕಾಲೇಜುಗಳನ್ನು ಮುಚ್ಚುವ ಪರಿಸ್ಥಿತಿಗೆ ಸರ್ಕಾರ ಆಡಳಿತ ವೈಫಲ್ಯವೇ ಕಾರಣವೆಂದು ಆರೋಪಿಸಿದರು. ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ತಾಲೂಕು ದಂಡಾಧಿಕಾರಿ ಗೈರು ಹಾಜರಿ ಹಿನ್ನೆಲೆಯಲ್ಲಿ ಪ್ರಭಾರ ತಾಲೂಕು ದಂಡಾಧಿಕಾರಿ ವಿಠಲ್ರವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ನವಾಜ್, ಸುರೇಶ್, ಗಜೇಂದ್ರ, ಸುರೇಶ್ಸಿಂಗ್,ಫೈರೋಜ್ ಇದ್ದರು.