ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತಾಲೂಕು ಕಚೇರಿ: ಲಂಚಾವತಾರ: ಮಳ್ಳೂರು ಶಿವಣ್ಣ ಆರೋಪ

Rashmi Kasaragodu
Updated On : 18 Feb 2014, 2:38 am

ಶಿಡ್ಲಘಟ್ಟ: ತಾಲೂಕು ಕಚೇರಿಯಲ್ಲಿ ಲಂಚಾವತಾರ ತಾಂಡವಾಡುತ್ತಿದ್ದು ಜಿಲ್ಲಾಡಳಿತ ಕಣ್ಣುಮುಚ್ಚಿ ಕುಳಿತಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮಳ್ಳೂರು ಶಿವಣ್ಣ ಆರೋಪಿಸಿದ್ದಾರೆ.
ತಾಲೂಕು ಕಚೇರಿ ಭೂಮಾಪನ ವಿಭಾಗಕ್ಕೆ ಭೇಟಿ ನೀಡಿದ ಅವರು ಜಮೀನಿನ ಸರ್ವೇ ಮತ್ತಿತರರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲು ಲಂಚ ಕೇಳುವ ಭೂಮಾಪನ ಇಲಾಖೆಯ ಅಧಿಕಾರಿಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿ ಮೇಲ್ವಿಚಾರಕ ನಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರು ಸೇರಿದಂತೆ ರೈತರ ಕೆಲಸಗಳನ್ನು ನಿಗಧಿತ ಅವಧಿಯೊಳಗೆ ಮಾಡಿಕೊಡಬೇಕೆಂದು ಸರಕಾರದ ಆದೇಶವಿದ್ದರೂ ಅದು ಕೇವಲ ಕಡತಗಳಿಗೆ ಸೀಮಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಭೂಮಾಪನ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಭೂಮಾಪನಾ ಇಲಾಖೆಯಲ್ಲಿ ಬೋಕರ್ಸ್ಗಳ ಹಾವಳಿ ಹೆಚ್ಚಾಗಿದ್ದು ಅರ್ಜಿ ಸಲ್ಲಿಸಿ ಒಂದೆ ದಿನದಲ್ಲಿ ಸರ್ವೇ ಮಾಡುವುದಕ್ಕೆ ಇಷ್ಟು, ವಾರಕ್ಕೆ ಸರ್ವೇ ಮಾಡಲು ಇಷ್ಟು ಎಂಬಂತೆ ಲಂಚ ನಿಗದಿ ಮಾಡಲಾಗಿದ್ದು ಕೇವಲ ರಿಯಲ್ ಎಸ್ಟೇಟ್ ಉದ್ದಿಮೆದಾರರು ನೀಡುವ ಲಂಚಕ್ಕೆ ಬಳಿಯಾಗಿ ರೈತರಿಗೆ ಅನ್ಯಾಯ ಆಗುತ್ತಿದೆ ಎಂದರು.
ಇಲಾಖೆ ನಿರ್ದೇಶಕ ಅಜ್ಜಪ್ಪ ಸ್ಥಳಕ್ಕೆ ಆಗಮಿಸಿ ರೈತರ ಅರ್ಜಿ ತ್ವರಿತವಾಗಿ ವಿಲೇವಾರಿ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಗೋಮಾಳ ಒತ್ತುವರಿ ತೆರವಿಗೆ, ಸಾರ್ವಜನಿಕ ರಸ್ತೆಗಳ ಒತ್ತುವರಿಗೆ ಬಂದ ಅರ್ಜಿಗಳಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಸೂಚಿಸಿ ಮಳ್ಳೂರು- ರಂಗನಾಥಪುರ ವಯಾ ಮುತ್ತೂರು ಬಂಡಿದಾರಿಯನ್ನು 15 ದಿನದೊಳಗೆ ಸರ್ವೇ ಮಾಡಿ ಎಂದು ಆದೇಶಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement