ದಿವ್ಯಭಾರತ್ ಕರಾಟೆ ಬೆಲ್ಟ್ ಪರೀಕ್ಷೆ
ಶಿಡ್ಲಘಟ್ಟ: ಪಟ್ಟಣದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗೋಜು ರಿಯೋ ಕರಾಟೆ ಡೂ ಸೇವಾಕಾಯ್ ಇಂಡಿಯಾದ ದಿವ್ಯಭಾರತ್ ಕರಾಟೆ ಡೂ ಅಸೋಸಿಯೇಷನ್ನಿಂದ ಬೆಲ್ಟ್ ಪರೀಕ್ಷೆ ನಡೆಸಲಾಯಿತು.
ತೂಕದ ಆಧಾರದ ಮೇಲೆ ಮಕ್ಕಳ ಕರಾಟೆ ಫೈಟ್ ನಡೆಸಲಾಯಿತು. ಕರಾಟೆಯಲ್ಲಿ ವಿಜೇತ ಮಕ್ಕಳಿಗೆ ಮತ್ತು ಬೆಲ್ಟ್ ಪರೀಕ್ಷೆ ಪಾಸಾದ ಮಕ್ಕಳಿಗೆ ಬೆಲ್ಟ್ಗಳನ್ನು ರಾಜ್ಯ ಕೂಡೋ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಎಂ.ಡಿ. ಜಬೀವುಲ್ಲಾ ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳು ವಿವಿಧ ಕರಾಟೆ ಕಸರತ್ತುಗಳನ್ನು ಪ್ರದರ್ಶಿಸಿದರು.
15 ರಿಂದ 20 ಕೆಜಿ ವಿಭಾಗ: ಜಯಸಿಂಹ(ಪ್ರಥಮ), ಜಸ್ವಂತ್ (ದ್ವಿತೀಯ), ಜಗದೀಶ್(ತೃತೀಯ) 20 ರಿಂದ 30 ಕೆಜಿ ವಿಭಾಗ- ಹರ್ಷನ್(ಪ್ರಥಮ), ಮಂಜುನಾಥ್ ( ದ್ವಿತೀಯ), ಗಂಗರಾಜು(ತೃತೀಯ) 30 ರಿಂದ 40 ಕೆಜಿ- ಪ್ರದೀಪ್( ಪ್ರಥಮ), ಭರದ್ವಾಜ(ದ್ವಿತೀಯ), ಓಂ ದೇಶಮುದ್ರೆ(ತೃತೀಯ) ಬಹುಮಾನ ಪಡೆದರು. ದಿವ್ಯಭಾರತ್ ಕರಾಟೆ ಡೂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿ. ಅರುಣ್ಕುಮಾರ್, ಟಿ.ಟಿ.ನರಸಿಂಹಪ್ಪ, ವೇಣು, ಅನಂತ್, ಪ್ರಕಾಶ್ ದೇವರಾಜ್ ಇದ್ದರು.
ಪಶು ಸಂತಾನ ಕ್ಷೀಣ: ಕಳವಳ
ಬಂಗಾರಪೇಟೆ: ಇತ್ತೀಚಿನ ದಿನಗಳಲ್ಲಿ ಪಶು ಸಂತಾನ ಕ್ಷೀಣಿಸುತ್ತಿದ್ದು ಅವುಗಳನ್ನು ಹೆಚ್ಚಿಸುವ ಸಲುವಾಗಿ ಜಾನುವಾರುಗಳ ರಕ್ಷಣೆಗಾಗಿ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕಿಸಬೇಕೆಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು.
ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಕೋಲಾರ ಹಾಲು ಒಕ್ಕೂಟ ಮತ್ತು ಪಶು ಸಂಗೋಪನಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾಲುಬಾಯಿ ಜ್ವರ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಹಸುಮೊಂದಕ್ಕೆ ಲಸಿಕೆ ಹಾಕುವ ಮೂಲಕ ಶಾಸಕರು ಉದ್ಘಾಟಿಸಿ ಮಾತನಾಡುತ್ತಾ,ಕಾಲುಬಾಯಿ ಜ್ವರದಿಂದ ಇತ್ತೀಚೆಗೆ ಹಸುಗಳು ಸಾವನ್ನಪ್ಪಿದ್ದು ರೈತರು ಮೊದಲೇ ಆರ್ಥಿಕ ಸ್ಥಿತಿಯಿಂದ ಕಂಗೆಟ್ಟಿದ್ದು ಜಾನುವಾರುಗಳ ಮರಣ ಹೋಮಂದಿ ಮತ್ತಷ್ಟು ಗುಕ್ಕುವಂತಾಗಿದೆ,ಇದರಿಂದ ಪಶು ಸಂತತಿ ಕಡಿಮೆಯಾಗುತ್ತಿದ್ದು ವೃದ್ಧಿಸುವ ಸಲುವಾಗಿ ಸರ್ಕಾರ ಕಡ್ಡಾಯವಾಗಿ ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕಿಸುವ ಯೋಜನೆ ಜಾರಿಗೆ ತಂದಿದೆ ಇದನ್ನು ಅರಿತು ರೈತರು ತಪ್ಪದೆ ಲಸಿಕೆ ಹಾಕಿಸಿ ಜಾನುವಾರುಗಳನ್ನು ರಕ್ಷಿಸಬೇಕೆಂದು ಕೋರಿದರು.ಅಲ್ಲದೆ ಸರ್ಕಾರ ರೈತ ಪರ ಹಾಗೂ ಸಾಮಾನ್ಯ ವರ್ಗದ ಜನರಿಗೆ ಹೊರೆಯಾಗದಂತ ಬಜೆಟ್ ಮಂಡಿಸಿ ಮಧ್ಯಮ ವರ್ಗದ ಜನರ ಆಶಾಕಿರಣವಾಗಿದ್ದಾರೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಾಲೋಚನೆಯನ್ನು ಶ್ಲಾಘಿಸಿದರು.
ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಜಯಸಿಂಹ ಕೃಷ್ಣಪ್ಪ ಮಾತನಾಡಿ ಹೈನುಗಾರಿಕೆಯಲ್ಲಿ ದೇಶದಲ್ಲೇ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಬರಗಾಲದಲ್ಲಿಯೂ ಜಿಲ್ಲೆಯಲ್ಲಿ ಹಾಲು ಉತ್ಪಾದನೆಯಲ್ಲಿ ಎಳ್ಳಷ್ಟು ಕುಂಟಿತವಾಗಿಲ್ಲ. ಹೈನುಗಾರಿಕೆ ರೈತರ ಜೀವನಾಡಿಯಾಗಿದ್ದು ಇದನ್ನು ಹೀಗೆ ಮುಂದುವರೆಸಲು ರೈತರು ತಮ್ಮ ಜಾನುವಾರುಗಳಿಗೆ ಮನುಷ್ಯರಿಗೆ ವರ್ಷಕ್ಕೆ ಎರಡು ಬಾರಿ ಪೊಲೀಯೋ ಲಸಿಕೆ ಹಾಕಿಸುವಂತೆ ಕಾಲುಬಾಯಿ ಜ್ವರ ಲಸಿಕೆ ಹಾಕಿಸಬೇಕೆಂದು ಕೋರಿದರು.ಕಾಲು ಬಾಯಿ ಜ್ವರದಿಂದ 272 ಜಾನುವಾರುಗಳು ಮೃತಪಟ್ಟಿದೆ ಇದನ್ನು ತಡೆಗಟ್ಟಲು ಪ್ರತಿಯೊಬ್ಬರು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ, ಟಿಎಪಿಸಿಎಂಎಸ್ ಅಧ್ಯಕ್ಷ ಮಾರ್ಕಂಡೇಗೌಡ, ತಾಪಂ ಉಪಾಧ್ಯಕ್ಷ ಸಂಪಂಗಿರೆಡ್ಡಿ, ಪಶು ಇಲಾಖೆ ಸಹಾಯಕ ನರ್ದೇಶಕ ಡಾ. ಜಗದೀಶ್, ಮುಖಂಡರಾದ ನಾರಾಯಣಶೆಟ್ಟಿ, ಹಾಲು ಒಕ್ಕೂಟದ ಅಧಿಕಾರಿಗಳಾದ ಚಂದ್ರಮೋಹನ್, ಪ್ರಕಾಶ್, ವೆಂಕಟರಮಣ, ಶ್ರೀನಿವಾಸಗೌಡ ಮತ್ತಿತರರು ಇದ್ದರು.