ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಪತಂಜಲಿ ಯೋಗ ಕೇಂದ್ರದಿಂದ 80ನೇ ಶಿಬಿರ ಉದ್ಘಾಟನೆ

Rashmi Kasaragodu
Updated On : 18 Feb 2014, 2:37 am
ಕ.ಪ್ರ. ವಾರ್ತೆ   ಕೋಲಾರ   ಫೆ.17
ಯೋಗ ಉತ್ತಮ ಆರೋಗ್ಯ ಸಂಸ್ಕೃತಿ ಕಲಿಸುವುದರೊಂದಿಗೆ ಮನುಷ್ಯನಲ್ಲಿರಬೇಕಾದ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಗೌರಿಬಿದನೂರು ವೃತ್ತ ನಿರೀಕ್ಷಕ ರಮೇಶ್ ಅಭಿಪ್ರಾಯಪಟ್ಟರು.
ನಗರದ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ 79ನೇ ಯೋಗ ಶಿಬಿರದ ಸಮಾರೋಪ ಹಾಗೂ 80ನೇ ವರ್ಗದ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಮ್ಮ ಸಂಸ್ಕೃತಿ,ಪರಂಪರೆಯಾದ ಯೋಗವನ್ನು ಇಂದು ಪಾಶ್ಚಿಮಾತ್ಯರು ಕಲಿಯುತ್ತಿದ್ದಾರೆ, ಸಂಸ್ಕಾರ ಮತ್ತು ಸಂಘಟನೆ ಮೂಲಕ ವಿವೇಕಾನಂದರ ಆದರ್ಶ ವ್ಯಕ್ತಿತ್ವವನ್ನು ಗಳಿಸಲು ಸಾಧ್ಯವೆಂದರು. ವಿವೇಕಾನಂದರ ಆದರ್ಶಪಾಲನೆ, ದೇಶಭಕ್ತಿ ಇಂದಿನ ಯುವಕರಿಗೆ ಅಗತ್ಯವಾಗಿದ್ದು, ಯೋಗ ಜೀವನ ಇದನ್ನು ನೀಡುತ್ತಿದೆ ಎಂದು ತಿಳಿಸಿದರು. ಯೋಗ ಕಲಿಯಲು ಯೋಗವಿರಬೇಕು ಎಂದ ಅವರು, ಇದರಿಂದ ಇಂದು ಬದಲಾದ ಆಹಾರ ಶೈಲಿಯಿಂದ ಎದುರಾಗಿರುವ ಅನೇಕ ರೋಗಗಳನ್ನು ತಡೆಯಬಹುದಾಗಿದೆ ಎಂದರು.
ಸನಾತನ ಸಂಸ್ಕೃತಿಯ ಯೋಗದಿಂದ ಭೌದ್ದಿಕ, ಮಾನಸಿಕ, ಸಾಮಾಜಿಕವಾಗಿ ಉತ್ತಮ ಆರೋಗ್ಯವನ್ನು ಪಡೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಸಮಿತಿ ಗೌರವಾಧ್ಯಕ್ಷ ನಂಜುಂಡಯ್ಯಶ್ರೇಷ್ಠಿ ಅವರು, ನಿರಂತರ ಯೋಗಾಭ್ಯಾಸಕ್ಕಾಗಿ ಯೋಗವುಂದಿರವನ್ನು ಸದ್ಬಳಕೆ ಮಾಡಿಕೊಳ್ಳಿ, ಉತ್ತಮ ಆರೋಗ್ಯ ಪಡೆಯಿರಿ ಎಂದು ಕೋರಿದರು.
ಸಾಮಾರೋಪ ಭಾಷಣ ಮಾಡಿದ ಯೋಗ ಶಿಕ್ಷಕ ಶ್ರೀನಿವಾಸಪುರದ ವೆಂಕಟೇಶಬಾಬು, ಮನಸ್ಸು ಶಾಂತವಾಗಿದ್ದರೆ ಮಾತ್ರ ಗುಣಾತ್ಮಕ ಯೋಚನೆ ಮೂಡುತ್ತದೆ ಎಂದ ಅವರು, ಇದಕ್ಕೆ ಯೋಗ ಸಹಕಾರಿ ಎಂದರು. ಧ್ಯಾನ, ಪ್ರಾಣಾಯಾಮ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ತಿಳಿಸಿ ಪ್ರತಿಯೊಬ್ಬರು ಯೋಗ ಕಲಿಕೆಗೆ ಬರುವಂತೆ ಕೋರಿದರು. ಸಮಿತಿಯ ಶಾರದಕ್ಕ ಪದಾಧಿಕಾರಿಗಳನ್ನು ಪರಿಚಯಿಸಿದರು. ಚಂದ್ರಣ್ಣ ಸಮಿತಿಯ ಪರಿಚಯ, ಡಾ. ಜನಾರ್ದನ್ ಭಾರತಮಾತಾ ಪೂಜಾ ವಿಧಾನಗಳನ್ನು ಪರಿಚಯಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement