ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಬಾಲ ಕಾರ್ಮಿಕಳನ್ನು ಪಾರು ಮಾಡಿದ ಅಧಿಕಾರಿಗಳು

Rashmi Kasaragodu
Updated On : 18 Feb 2014, 2:36 am

ಶಿಡ್ಲಘಟ್ಟ: ಪಟ್ಟಣದ ಸಿದಾರ್ಥ ನಗರದಲ್ಲಿ ಬಾಲ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಬಿಡುಗಡೆಗೊಳಿಸಿ ಶಾಲೆಗೆ ಸೇರಿಸಿದ ಘಟನೆ ನಡೆದಿದೆ.
ಸಿದಾರ್ಥ ನಗರದ ಐಶ್ವರ್ಯ ಬಾಲ ಕಾರ್ಮಿಕ ಪದ್ಧತಿಯಿಂದ ಬಿಡುಗಡೆಯಾದ ಹುಡುಗಿ. ಐಶ್ವರ್ಯ ಸಿದಾರ್ಥನಗರದ ಸರ್ಕಾರಿ ಶಾಲೆಯಲ್ಲಿ 6 ನೇ ತರಗತಿಯವರೆಗೆ ವ್ಯಾಸಂಗ ಮಾಡಿದ್ದು, ಕಾರಣಾಂತರಗಳಿಂದ ಟ್ವಿಸ್ಟಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ಅಧಿಕಾರಿಗಳ ಗಮನಕ್ಕೆ ಬಂದಿದ್ದು,  ಅಧಿಕಾರಿಗಳು ಅಸ್ಲಾಮ್ ಪಾಷಾಗೆ ಸೇರಿದ ಟ್ವಿಸ್ಟಿಂಗ್ ಫ್ಯಾಕ್ಟರಿಗೆ ದಾಳಿ ನಡೆಸಿ ಬಾಲಕಿಯನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ.
ಕಾರ್ಮಿಕ ನಿರೀಕ್ಷಕ ರಾಮಪ್ಪ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಬಿ.ಆರ್. ರಮೇಶ್, ಎನ್ಜಿಒ ಸೌಮ್ಯ, ಪುರಸಭೆ ಅಧಿಕಾರಿಗಳಾದ ನಾಗೇಶ್, ಪ್ರದೀಪ್ ದಾಳಿಯಲ್ಲಿ ಭಾಗವಹಿಸಿದ್ದರು.

ಗ್ರಾಪಂ ಸದಸ್ಯ ಸ್ಥಾನಕ್ಕೆ ಚುನಾವಣೆ


ಗುಡಿಬಂಡೆ: ತಾಲೂಕಿನ ವರ್ಲಕೊಂಡ ಗ್ರಾಪಂನಲ್ಲಿ ಸದಸ್ಯರೊಬ್ಬರ ರಾಜಿನಾಮೆಯಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಮಾ.2 ರಂದು ಚುನಾವಣೆ ನಡೆಯಲಿದೆ. ಈ ಸ್ಥಾನ ಹಿಂದುಳಿದ ವರ್ಗ (ಅ), ಮಹಿಳೆಗೆ ಮೀಸಲಿದ್ದು, ನಾಮಪತ್ರ ಸಲ್ಲಿಸಲು ಫೆ.19 ಕೊನೆಯ ದಿನಾಂಕವಾಗಿದೆ ಎಂದು ಚುನಾವಣಾಧಿಕಾರಿ ಮ.ಗ. ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement