ವಿದ್ಯಾರ್ಥಿ ಆತ್ಮಹತ್ಯೆ
ಶ್ರೀನಿವಾಸಪುರ: ಜೀವನದಲ್ಲಿ ಜಿಗುಪ್ಸೆಗೊಂಡ ವಿದ್ಯಾರ್ಥಿಯೊಬ್ಬ ಬೈರಪಲ್ಲಿ ಬಳಿಯ ಬೈರವೇಶ್ವರ ವಿದ್ಯಾನಿಕೇತನದ ಬಳಿ ನೇಣು ಹಾಕಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ. ವಿದ್ಯಾಸಂಸ್ಥೆಯಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ವಿನೋದ್ ಕುಮಾರ್ ಮೃತ ವಿದ್ಯಾರ್ಥಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹ್ಯಾಟ್ರಿಕ್ ಸಾಧನೆ
ಚಿಂತಾಮಣಿ: ಸಿ.ದೊಡ್ಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸತತ 3 ನೇ ಬಾರಿಗೆ ಅಧ್ಯಕ್ಷರಾಗಿ ಡಿ.ವಿ. ಗೋಪಾಲಕೃಷ್ಣ ಹ್ಯಾಟ್ರಿಕ್ ಸಾಧಿಸಿದ್ದಾರೆ. ಸಿ.ದೊಡ್ಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಿ.ವಿ. ಗೋಪಾಲಕೃಷ್ಣ ಬಹುಮತ ಪಡೆದಿದ್ದಾರೆಂದು ಚುನಾವಣಾಧಿಕಾರಿ ಎಸ್.ಫಕೃಸಾಬಿ ಘೋಷಿಸಿದ್ದಾರೆ.
ನಿರ್ದೇಶಕರ ಆಯ್ಕೆ
ಶ್ರೀನಿವಾಸಪುರ: ತಾಲೂಕಿನ ನೆಲವಂಕಿ ಹೋಬಳಿಯ ಪಿ. ಜೀಡಮಾಕಲಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ನಿರ್ದೇಶಕರಾಗಿ ರಾಮಚಂದ್ರಾರೆಡ್ಡಿ, ಮುನಿಶಾಮಿ, ಗುರ್ರಮ್ಮ, ಚಿಕ್ಕಮುನಿಯಪ್ಪ, ವೆಂಕಟರವಣ, ವಿ. ಪ್ರಭಾಕರರೆಡ್ಡಿ, ಲಕ್ಷ್ಮಕ್ಕ, ರವಣಮ್ಮ, ವೆಂಕಟಮ್ಮ, ಹಾಗೂ ಎಸ್.ವಿ. ವೆಂಕಟರೆಡ್ಡಿ ಆಯ್ಕೆಯಾಗಿದ್ದಾರೆ.