ಅಕ್ರಮ ಮರಳು ಲಾರಿಗಳ ವಶ
ಗೌರಿಬಿದನೂರು: ತಾಲೂಕಿನ ಹೊಸೂರು ಹೋಬಳಿಯ ಕುರೂಡಿ ಅರಣ್ಯ ವಲಯ ಸಮೀಪ 7 ಲಾರಿಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ಪಿಎಸ್ಐ ಟಿ.ಬಿ. ಶಿವಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಸುಮಾರು 2ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ಅಕ್ರಮ ಮರಳು ಮತ್ತು ಲಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಲಾರಿಗಳನ್ನು ತಾಲೂಕು ದಂಡಾಧಿಕಾರಿ ಡಾ.ಎನ್. ಭಾಸ್ಕರ್ ವಶಕ್ಕೆ ನೀಡಲಾಗಿದೆ. ದಾಳಿಯಲ್ಲಿ ಪೊಲೀಸ್ ಪೇದೆಗಳಾದ ಶ್ರೀರಾಮ್, ಗಂಗಾಧರಪ್ಪ, ವೆಂಕಟೇಶ್, ಚಾಲಕ ವೇಣು ಭಾಗವಹಿಸಿದ್ದರು.