ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಎಸ್ಡಿಯಿಂದ ಕಾರ್ಯಾಗಾರ

Rashmi Kasaragodu
Updated On : 19 Feb 2014, 1:57 am

ಕೋಲಾರ: ಭಾರತೀಯ ರಿಪಬ್ಲಿಕನ್ ಪಕ್ಷ ಹಾಗೂ ಸಮತಾ ಸೈನಿಕದಳ ಕೋಲಾರ ಶಾಖೆ ವತಿಯಿಂದ ರಾಜ್ಯಾಧಿಕಾರದತ್ತ ದಲಿತರ ಚಿತ್ತ ರಾಜ್ಯದಲ್ಲಿ ಭೀಮಶಕ್ತಿ ಅನಾವರಣ ಕುರಿತು ಕೋಲಾರ ಜಿಲ್ಲಾ ಕಾರ್ಯಕರ್ತರ ಕಾರ್ಯಾಗಾರವನ್ನು ಫೆ.19ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಾರತೀಯ ರಿಪಬ್ಲಿಕನ್ ಪಕ್ಷ ಹಾಗೂ ಸಮತಾ ಸೈನಿಕದಳದ ರಾಜ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ಉಪಾಧ್ಯಕ್ಷ ರಾಮಕೃಷ್ಣಯ್ಯ ಅಧ್ಯಕ್ಷತೆ ವಹಿಸುವರು. ರಾಜ್ಯ ಮುಖಂಡ ಕೆ. ಚಂದ್ರಶೇಖರ್ ಆಶಯ ಭಾಷಣ ಮಾಡಲಿದ್ದಾರೆ.
ಮು.ತಿಮ್ಮಯ್ಯ, ವಿ. ನಾಗರಾಜ್, ಲೋಲಾಕ್ಷ, ಗೊಲ್ಲಹಳ್ಳಿ ಶಿವಪ್ರಸಾದ್ ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಕಾಡುಗೋಡಿ ಸೊಣ್ಣಪ್ಪ, ಬಿ.ವಿ.ವಿ. ಗಿರಿ, ಕೃಷ್ಣಯ್ಯ, ವೆಂಕಟರವಣಪ್ಪ, ಮಣಿಘಟ್ಟ ರಾಮಯ್ಯ, ಸಂಜೀವಪ್ಪ, ಚಿಟ್ಟಿಬಾಬು, ಚಿನ್ನಾಪುರ ವೆಂಕಟೇಶ್ ಭಾಗಹಿಸಲಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement