ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕನ್ನಡಿಗ ಪ್ರಭಾಕರ ರಚಿತ ಕುದುರೆ ಮೊಟ್ಟೆ ಅಸ್ಸಾಮಿ ಭಾಷೆಗೆ ಅನುವಾದ

Rashmi Kasaragodu
Updated On : 19 Feb 2014, 2:04 am

ಕೋಲಾರ: ಜಿಲ್ಲೆಯವರೇ ಆದ ಕಾಮರೂಪಿ ಕಾವ್ಯನಾಮದ ಎಂ.ಎಸ್. ಪ್ರಭಾಕರ 1980ರ ದಶಕದಲ್ಲಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಅಪರೂಪದ ಸಾಹಿತಿ.
ಅವರು ಬರೆದ ಕುದುರೆ ಮೊಟ್ಟೆ ಕೃತಿ ಇದೀಗ ಅಸ್ಸಾಮಿ ಭಾಷೆಯಲ್ಲಿ ಪ್ರಕಟವಾಗಿದ್ದು ಅಸ್ಸಾಮ್ನಲ್ಲಿ ಅಪಾರ ಜನಪ್ರಿಯತೆ ಪಡೆಯುತ್ತಿದೆ. ಕುದುರೆ ಮೊಟ್ಟೆ ಕೃತಿಯನ್ನು ಧಾರವಾಡದ ಮನೋಹರ ಗ್ರಂಥಮಾಲೆ 1974ರಲ್ಲಿ ಪ್ರಕಟಿಸಿದ್ದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರಕ್ಕೆ ಭಾಜನವಾಗಿತ್ತು. ಅಸ್ಸಾಮ್ನ ಮಹೇಶ್ ಡೇಖಾ ಅವರ ನೆರವಿನಿಂದ ಸ್ವತಃ ಎಂ.ಎಸ್. ಪ್ರಭಾಕರ ಅವರೇ ಈ ಕೃತಿಯನ್ನು ಘೊಡಾರ್ ಡಿಮಾ ಹೆಸರಿನಲ್ಲಿ ಅಸ್ಸಾಮಿ ಭಾಷೆಗೆ ಅನುವಾದ ಮಾಡಿದ್ದಾರೆ. ತುಲ್ತುಲ್ ಬರುವಾ ಅವರು ಕೃತಿಯ ಅಂತಿಮ ಸಂಪಾದನೆ ಮಾಡಿದ್ದು ಗುವಾಹಟಿಯ ಅನ್ವೇಷ ಪ್ರಕಾಶನ ಇದನ್ನು ಪ್ರಕಟಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement