ಕೋಲಾರ: ಇಂದು ಕಲ್ಯಾಣೋತ್ಸವ
ಕೋಲಾರ: ನಗರದ ಪುರಾಣ ಪ್ರಸಿದ್ಧ ಅಮ್ಮವಾರಿಪೇಟೆಯ ಶ್ರೀ ಭೂನೀಳಾ ಸಮೇತ ವರದರಾಜಸ್ವಾಮಿ ದೇವಾಲಯದಲ್ಲಿ ಫೆ.19 ರಂದು ಮಹಾಭಿಷೇಕ, ಮಹಾ ಸುದರ್ಶನ ಹೋಮ, ಕಲ್ಯಾಣೋತ್ಸವ ಹಾಗೂ ಸಂಜೆ ಗರುಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯದ ಅರ್ಚಕ ಮುರಳಿ ರಾಮಾನುಜಂ ತಿಳಿಸಿದ್ದಾರೆ. ದೇವಾಲಯದಲ್ಲಿ ಪ್ರತಿ ಶನಿವಾರ ಅಭಿಷೇಕ, ಪ್ರತಿ ಹುಣ್ಣಿಮೆಯಂದು ಸಂಜೆ ಸತ್ಯನಾರಾಯಣಸ್ವಾಮಿ ಪೂಜೆಯನ್ನು ಭಕ್ತಾಧಿಕಾಗಳ ಸಹಕಾರದಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.