ಚಿನ್ನದ ಗಣಿ ಆರಂಭಕ್ಕೆ ಒತ್ತಾಯಿಸಿ ಪ್ರತಿಭಟನೆ
ಬಂಗಾರಪೇಟೆ: ಕೆಜಿಎಫ್ ಚಿನ್ನದ ಗಣಿ ಪುನರಾರಂಭಿಸಬೇಕೆಂದು ಆಗ್ರಹಿಸಿ ಆತ್ಮವಿಶ್ವಾಸ ವೇದಿಕೆ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ಮಾಡಿದರು.
ಕೆಜಿಎಫ್ ಚಿನ್ನದ ಗಣಿ ನಷ್ಟದ ನೆಪವೊಡ್ಡಿ ಮುಚ್ಚಿ 12 ವರ್ಷಗಳೇ ಕಳೆದರೂ ಗಣಿ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಪುನರ್ವಸತಿ ಕಲ್ಪಿಸಿಲ್ಲ. ಬದಲಾಗಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಾ ಕಾರ್ಮಿಕರ ಬದುಕಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸಂಸದ ಕೆ.ಎಚ್. ಮುನಿಯಪ್ಪ ಮತ್ತೆ ಗಣಿ ಪ್ರಾರಂಭಿಸುವುದಾಗಿ ಹೇಳುತ್ತಿದ್ದಾರೆ ವಿನಃ ಈವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಗಣಿ ತೋರಿಸಿ ಮತಗಳಿಸಲು ರಾಜಕೀಯ ಪಕ್ಷಗಳು ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು. ಪ್ರತಿಭಟನೆ ನಂತರ ತಾಸೀಲ್ದಾರ್ಗೆ ಮನವಿ ನೀಡಿದರು. ವೇದಿಕೆ ರಾಜ್ಯಧ್ಯಕ್ಷ ಎಂ.ಎನ್. ಭಾರದ್ವಾಜ್ ಅಜಾಮ್ ಪಾಷ, ಅಬ್ಬಯ್ಯಪ್ಪ, ಅನ್ಸರ್ ಇದ್ದರು.