ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತೆಂಗಿನ ಮರದಿಂದ ಬಿದ್ದು ಸಾವು

Rashmi Kasaragodu
Updated On : 19 Feb 2014, 1:56 am

ಚಿಂತಾಮಣಿ: ಮರ ಏರಿ ತೆಂಗಿನಕಾಯಿ ಕೀಳಲು ಹೋದ ಯುವಕನೊಬ್ಬ ಕಾಲುಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಗರದ ವೆಂಕಟಗಿರಿಕೋಟೆ ಬಳಿ ನಡೆದಿದೆ.
ಶಿವ (19) ಮೃತಪಟ್ಟ ಯುವಕ. ಈತ ನಗರದ ಪ್ರಗತಿ ವಿದ್ಯಾಸಂಸ್ಥೆ ಹಿಂಭಾಗದ ತೋಟವೊಂದರಲ್ಲಿ ಮರ ಏರಿ ತೆಂಗಿನಕಾಯಿ ಕೀಳಲುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ. ಸುದ್ದಿ ತಿಳಿದ ತಕ್ಷಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿರುವುದಾಗಿ ತಿಳಿದು ಬಂದಿದೆ.
ಅಪಘಾತದಲ್ಲಿ ಪೇದೆಗೆ ಗಾಯ
ಕರ್ತವ್ಯ ಮುಗಿಸಿಕೊಂಡು ಬೈಕ್ನಲ್ಲಿ ತಮ್ಮ ಮನೆಗೆ ಹಿಂದಿರುಗುತ್ತಿದ್ದಾಗ ಟೆಂಪೋವೊಂದು ಡಿಕ್ಕಿ ಹೊಡೆದ ಪರಿಣಾಮ, ಪೊಲೀಸ್ ಪೇದೆ ಗಾಯಗೊಂಡಿದ್ದಾರೆ.
ಬಟ್ಲಹಳ್ಳಿ ಠಾಣೆ ಪೇದೆ ಕೃಷ್ಣಪ್ಪ ಗಾಯಗೊಂಡವರು. ಕರ್ತವ್ಯದ ಮೇರೆಗೆ ಬಟ್ಲಹಳ್ಳಿಯಿಂದ ನಗರಕ್ಕೆ ಬಂದು ನಂತರ ತಮ್ಮ ದ್ವಿಚಕ್ರ ವಾಹನದಲ್ಲಿ ಸೋಮವಾರ ರಾತ್ರಿ 11 ಗಂಟೆಯಲ್ಲಿ ಸ್ವಗ್ರಾಮವಾದ ಮೈಲಾಂಡ್ಲಹಳ್ಳಿಗೆ ಹೋಗುತ್ತಿದ್ದಾಗ, ಚಿಂತಾಮಣಿ- ಕೋಲಾರ ರಸ್ತೆಯ ರಾಂಪುರ ಗೇಟ್ ಬಳಿ ಟೆಂಪೋ ಡಿಕ್ಕಿ ಹೊಡೆದಿದೆ. ಆಗ ಗಂಭೀರ ಗಾಯಗೊಂಡ ಕೃಷ್ಣಪ್ಪ ಅವರನ್ನು ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಈ ಸಂಬಂಧ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement