ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ತೋಳ ದಾಳಿಗೆ 19 ಕುರಿಗಳ ಬಲಿ

Rashmi Kasaragodu
Updated On : 19 Feb 2014, 1:55 am

ಚಿಂತಾಮಣಿ: ಕುರಿಗಳ ಗುಂಪಿನ ಮೇಲೆ ತೋಳವೊಂದು ದಾಳಿ ನಡೆಸಿದ ಪರಿಣಾಮ 19 ಕುರಿಗಳು ಬಲಿಯಾಗಿ, 10ಕ್ಕೂ ಹೆಚ್ಚು ತೀವ್ರ ರಕ್ತಸ್ರಾವದಿಂದ ಗಾಯಗೊಂಡಿರುವ ಘಟನೆ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಪ್ಪಲ್ಲಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ತಾಲೂಕಿನ ಯಗವಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೀಲಪ್ಪಲ್ಲಿ ಗ್ರಾಮದ ರೈತ ಆಂಜನೇಯರೆಡ್ಡಿ ಎಂಬವರಿಗೆ ಸೇರಿದ ಕುರಿಗಳ ಹಟ್ಟಿ ಮೇಲೆ ಈ ತೋಳ ದಾಳಿ ಮಾಡಿದೆ.
 ಸೋಮವಾರ ರಾತ್ರಿ ತೋಳವು ಗ್ರಾಮಕ್ಕೆ ನುಗ್ಗಿ ಹಲವು ಪ್ರಾಣಿಗಳ ಮೇಲೆ ದೌರ್ಜನ್ಯ ಮಾಡಿ ಗಾಯಗೊಳಿಸಿರುವುದಾಗಿ ತಿಳಿದುಬಂದಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿ ಪ್ರತಿ ಮನೆಗೆ ಒಬ್ಬರಂತೆ ದೊಣ್ಣೆ ಹಿಡಿದು ಹಸು, ಕರು ದನಗಳನ್ನು ಮತ್ತು ಕುರಿಗಳನ್ನು ರಕ್ಷಿಸಬೇಕಾದ ಪರಿಸ್ಥಿತಿ ಒದಗಿದೆ.
ಗ್ರಾಮಸ್ಥರು ಈ ತೋಳದ ಬಗ್ಗೆ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ಮೂಡಿಸಿ ರಕ್ಷಣೆ ಕಲ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement