ಮಣಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘ 'ಕೈ'ವಶ
ಕೋಲಾರ: ತಾಲೂಕಿನ ಮಣಿಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರು ಜಿಲ್ಲಾ ಕಾಂಗ್ರೆಸ್ ಮುಖಂಡ ಮಣಿಗಟ್ಟ ಸೊಣ್ಣೇಗೌಡರ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಹತ್ತು ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಿದ್ದಾರೆ. ನಿರ್ದೇಶಕರಾಗಿ ಎಂ. ನಾರಾಯಣರೆಡ್ಡಿ, ವೆಂಕಟರಾಮಪ್ಪ, ಜಿ. ಚಂದ್ರೆಗೌಡ, ರಾಮರೆಡ್ಡಿ, ಎನ್. ಚಂಗಾರೆಡ್ಡಿ, ಪಿ. ಶ್ರೀನಿವಾಸಪ್ಪ, ಹನುಮಪ್ಪ, ಎನ್. ರಾಮಚಂದ್ರ, ಚೌಡಮ್ಮ, ಮತ್ತು ವೆಂಕಟಮ್ಮ ಆಯ್ಕೆಯಾಗಿರುತ್ತಾರೆ.