ಮಾಲೂರಲ್ಲಿ ನಮೋ ಟೀ ಸ್ಟಾಲ್ ಆರಂಭ
ಮಾಲೂರು: ನರೇಂದ್ರ ಮೋದಿ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವರನ್ನು ಪ್ರಧಾನಿಯಾಗಿ ಕಾಣಬೇಕೆಂಬ ದೇಶದ ಯುವಕರ ಕನಸು ನನಸಾಗಲಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಸ್ತುವಾರಿ ರಾಜ್ಯ ಯುವ ಮೋರ್ಚಾ ಮುಖಂಡ ಯತೀಶ್ ಜಿ. ಹೇಳಿದರು. ತಾಲೂಕಿನ ಡಿ.ಎನ್. ದೊಡ್ಡಿ ಗ್ರಾಮದಲ್ಲಿ ಬಿಜೆಪಿ ಯುವಮೋರ್ಚಾ ಪ್ರಾರಂಭಿಸಿರುವ ನಮೋ ಟೀ ಸ್ಟಾಲ್ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ರವರ ಎಲಬು ಇಲ್ಲದ ನಾಲಿಗೆ ಹೇಳಿದ ಮಾತು ಬಿಜೆಪಿಗೆ ಒಳ್ಳೆಯದೇ ಆಗಿದೆ ಎಂದರು. ಬಿಜೆಪಿ ಯುವ ರಾಜ್ಯ ಪ್ರಧಾನ ಕಾರ್ಯದರ್ಶಿ ಓಂ ಶಕ್ತಿ ಚಲಪತಿ, ತಾಲೂಕು ಬಿಜೆಪಿ ಅಧ್ಯಕ್ಷ ಸೂ. ವೆಂಕಟೇಶ್, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಮೋದ್ ಮಾತನಾಡಿದರು. ತಾಲೂಕು ಯುವ ಬಿಜೆಪಿ ಅದ್ಯಕ್ಷ ಅಪ್ಪಿರಾಜು, ಲಕ್ಕೂರು ಹೋಬಳಿ ಅಧ್ಯಕ್ಷ ಗುರುನಾಥ ರೆಡ್ಡಿ, ಕಾರ್ಯದರ್ಶಿ ಕೆ.ಸಿ. ರೆಡ್ಡಿ, ತಾಪಂ ಸದಸ್ಯ ಗೋಪಾಲ್ಗೌಡ, ಗುರುಮೂರ್ತಿ ರೆಡ್ಡಿ, ನಂಜುಂಡ, ಜಗದೇನಹಳ್ಳಿ ಪ್ರವೀಣ್ ಇದ್ದರು.