ಸಭೆ ಮಾಹಿತಿ ನೀಡದ ಅಧಿಕಾರಿಗಳು; ದಲಿತ ಸಂಘಟನೆಗಳ ಪ್ರತಿಭಟನೆ
ಶಿಡ್ಲಘಟ್ಟ: ಪುರಸಭೆಯಲ್ಲಿ ದಲಿತರ ಕುಂದು ಕೊರತೆ ಸಭೆ ಕರೆದಿದ್ದು, ದಲಿತ ಮುಖಂಡರಿಗೆ ತಾಲೂಕು ಆಡಳಿತ ಮಾಹಿತಿ ಕೊಟ್ಟಿಲ್ಲವೆಂದು ಆರೋಪಿಸಿ ಸಭೆ ಬಹಿಷ್ಕರಿಸಿದ ಘಟನೆ ನಡೆಯಿತು.
ತಾಲೂಕು ಕಚೇರಿಯಲ್ಲಿ ದಲಿತರ ಕುಂದು ಕೊರತೆಗಳ ಸಭೆ ಕರೆಯಬೇಕೆಂದು ಸರ್ಕಾರದಿಂದ ಸುತ್ತೋಲೆ ಹೊರಡಿಸಿದ್ದು, ತಹಸೀಲ್ದಾರರು ತಾಲೂಕು ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿದ್ದರು. ಈ ವಿಷಯ ತಾಲೂಕು ಆಡಳಿತ 7 ದಿನಗಳ ಮುಂಚೆ ಪತ್ರ ಮುಖೇನ ತಿಳಿಸಿಬೇಕಾಗಿದ್ದು, ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿ ದಲಿತ ಮುಖಂಡರಿಗೆ ತಿಳಿಸಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮುಖಂಡ ವೆಂಕಟೇಶ್ ಮಾತನಾಡಿ, ಸರ್ಕಾರ ದಲಿತರಿಗೆ ಹಲವು ಸವಲತ್ತು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ, ಸರ್ಕಾರದ ಸುತ್ತೋಲೆ ಕಾರಣಕ್ಕೆ ಮಾತ್ರ ಸಭೆ ಕರೆದಿದ್ದಾರೆ ಎಂದು ಆರೋಪಿಸಿದರು. ಸಭೆ ಬಹಿಷ್ಕರಿಸಿದ ದಲಿತ ಮುಖಂಡರು ತಾಲೂಕು ಕಚೇರಿ ಮುಂದೆ ಘೋಷಣೆ ಕೋಗಿದರು. ಸಭೆಯಲ್ಲಿ ತಹಸೀಲ್ದಾರ್ ನಾರಾಯಣಸ್ವಾಮಿ, ವೃತ್ತ ನಿರೀಕ್ಷಕ ಶ್ರೀನಿವಾಸ್, ಪುರ ಠಾಣೆ ಪಿಎಸ್ಐ ಪುರುಷೋತ್ತಮ್, ರಘುನಾಥರೆಡ್ಡಿ, ದೇವರಾಜೇ ಗೌಡ, ಗೊರಮಡುಗು ನಾರಾಯಣಸ್ವಾಮಿ, ಶಿಡ್ಲಘಟ್ಟ ನರಸಿಂಹ ಮೂರ್ತಿ, ದ್ಯಾವ ಕೃಷ್ಣಪ್ಪ, ವೆಂಕಟೇಶ್, ಲಕ್ಷೀನಾರಾಯಣ, ಅರುಣ್ಕುಮಾರ್, ಕಲಾ ಮಂಡಳಿ ಶಿವಪ್ಪ, ಶ್ರೀರಾಮಪ್ಪ ಇದ್ದರು.