ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಅಧಿಕಾರ ಸಿಕ್ಕ ಮೇಲೆ ಬಿಡುವುದು ಕಷ್ಟ

Rashmi Kasaragodu
Updated On : 20 Feb 2014, 2:35 am

ಕೋಲಾರ: ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ಮತ್ತು ಎಪಿಎಂಸಿ ಅಧ್ಯಕ್ಷೆ ರಾಜೇಶ್ವರಿಯವರು ಕೊಟ್ಟ ಮಾತು ಉಳಿಸಿಕೊಳ್ಳುವ ನಂಬಿಕೆ ಇದೆ ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಕೆ. ಶ್ರೀನಿವಾಸಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಯಾರಿಗೇ ಆಗಲಿ ಅಧಿಕಾರ ಸಿಕ್ಕ ಮೇಲೆ ಕುರ್ಚಿ ಬಿಟ್ಟುಕೊಡಲು ಸ್ವಾಭಾವಿಕವಾಗಿ ಕಷ್ಟವಾಗುತ್ತದೆ, ಒಪ್ಪಂದದ ಪ್ರಕಾರ ಅವಧಿ ಮುಗಿದಿರುವುದರಿಂದ ಇವರಿಬ್ಬರು ಕೊಟ್ಟ ಮಾತು ಉಳಿಸಿಕೊಳ್ಳುವರೆಂಬ ನಂಬಿಕೆ ಇದೆ ಎಂದರು.
ವೇಮಗಲ್ ಜಿಪಂ ಸದಸ್ಯ ಆಶಾ ಲೋಕೇಶ್ ಅವರು ಪಕ್ಷದ ಮುಖಂಡರ ಬಳಿ ತಮ್ಮ ಅಳಲು ತೋಡಿಕೊಳ್ಳದೆ ಜಿಪಂ ಸಾಮಾನ್ಯ ಸಭೆಯಲ್ಲಿ ರಾಜಿನಾಮೆ ಪತ್ರ ನೀಡಿರುವುದು ಪಕ್ಷಕ್ಕೆ ಆದ ಮುಜುಗರವಲ್ಲವೇ ಎಂಬುದಕ್ಕೆ ಉತ್ತರಿಸದ ಶ್ರೀನಿವಾಸಗೌಡ, ಪರಿಸ್ಥಿತಿ ಸರಿ ಹೋಗುತ್ತದೆ, ಈ ಹಿಂದೆ ಆಗಿರುವ ತೀರ್ಮಾನ ಮತ್ತು ಮಾತಿನಂತೆ ಜಿಪಂ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ, ಅದೇ ರೀತಿ ಎಪಿಎಂಸಿ ಅಧ್ಯಕ್ಷರೂ ನಡೆದುಕೊಳ್ಳುತ್ತಾರೆಂದರು.



ಸಾಮಾಜಿಕ ನ್ಯಾಯ ಇಲ್ಲದ ಬಜೆಟ್
ಚಿಂತಾಮಣಿ: ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನರಿಗೆ ಬಜೆಟ್ನಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ ಎಂದು ಶಿಡ್ಲಘಟ್ಟ ಶಾಸಕ ಎಂ. ರಾಜಣ್ಣ ಆರೋಪಿಸಿದ್ದಾರೆ. ತಾಲೂಕಿನ ಚಿಲಕಲನೇರ್ಪು ಹೋಬಳಿ ಕ್ಷೇತ್ರ ಪ್ರವಾಸದಲ್ಲಿ ಮಾತನಾಡಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಉಭಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ, ಡಾ.ಪರಮಶಿವಯ್ಯ ವರದಿ ಜಾರಿಗೆ ಮುಂದಾಗದಿರುವುದು ಕಾಂಗ್ರೆಸ್ ಗಿಮಿಕ್ ರಾಜಕಾರಣ ಎಂದು ಕಿಡಿಕಾರಿದು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement