ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಆಂಧ್ರ ಬಂದ್; ರಾಜ್ಯ ಸಾರಿಗೆಗೆ ನಷ್ಟ

Rashmi Kasaragodu
Updated On : 20 Feb 2014, 2:37 am

ಎನ್. ಬಾಬು
ಚಿಂತಾಮಣಿ: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ವಿರೋಧಿಸಿ ಅಖಂಡ ಆಂಧ್ರಕ್ಕಾಗಿ ಬಂದ್ಗೆ ಒತ್ತಾಯಿಸಿರುವುದರಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಇಲ್ಲದೆ ರಾಜ್ಯ ಸರ್ಕಾರ ಬೊಕ್ಕಸಕ್ಕೆ ಲಕ್ಷಾಂತರ ರುಪಾಯಿ ನಷ್ಟ ಉಂಟಾಗಿದೆ.
ದಿನ ನಿತ್ಯ ಸುಮಾರು 15 ಕ್ಕೂ ಹೆಚ್ಚು ರಾಜ್ಯ ಸಾರಿಗೆ ಬಸ್ಗಳು ಚಿಂತಾಮಣಿ ಡಿಪೋದಿಂದ ಆಂಧ್ರಪ್ರದೇಶದ ತಿರುಪತಿ, ಮದನಪಲ್ಲಿ, ಹಿಂದೂಪುರ, ಪಾವಗಡ ಮತ್ತಿತರ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಈಗ ಬಂದ್ ಹಿನ್ನೆಲೆಯಲ್ಲಿ ಚಿಂತಾಮಣಿ ಘಟಕಕ್ಕೆ ಸುಮಾರು 3 ಲಕ್ಷ ರುಪಾಯಿ ನಷ್ಟ ಸಂಭವಿಸಿದೆಯೆಂದು ಅಂದಾಜಿಸಲಾಗಿದೆ. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿವಾದದಿಂದ ಆಂಧ್ರಪ್ರದೇಶ ಬುಧವಾರ ಬಂದ್ ಹಿನ್ನೆಲೆಯಲ್ಲಿ ಚಿಂತಾಮಣಿ ಕಡೆಯಿಂದ ಈ ಭಾಗದ ರೈತರು ಬೆಳೆದ ಹೂ ಮತ್ತು ತರಕಾರಿ ಸಾಗಿಸಲಾಗದೆ ಲಕ್ಷಾಂತರ ರು. ನಷ್ಟ ಸಂಭವಿಸಿದೆ ಎಂದು ರೈತರು ಹಾಗೂ ದಲ್ಲಾಳಿಗಳ ಅಳವತ್ತುಕೊಂಡಿದ್ದಾರೆ.
ಬೆಂಗಳೂರುನಿಂದ ಚಿಂತಾಮಣಿ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಹಲವರು ನಗರದ ಬಸ್ ನಿಲ್ದಾಣ ಮತ್ತು ವಸತಿ ನಿಲಯದಲ್ಲಿ ತಂಗಿದ್ದಾರೆ.

ಭುಗಿಲೆದ್ದ ಜಾತಿ ಪ್ರಮಾಣ ಪತ್ರದ ವಿವಾದ

ಮುಳಬಾಗಲು: ಚನ್ನದಾಸರ್ ಮತ್ತು ಬುಡುಗ ಜಂಗಮ ಜನಾಂಗಕ್ಕೆ ಪರಿಶಿಷ್ಟ ಜಾತಿ ಪ್ರವರ್ಗದ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಒತ್ತಾಯಿಸುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘಟನೆಗಳ ಸಂಯುಕ್ತ ರಂಗದ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟಜಾತಿ ಮತ್ತು ಪಂಗಡ ಅಸ್ಪೃಶ್ಯ ಜಾತಿಗಳಿಗೆ ಸೇರಿರುವ ಸಣ್ಣಪುಟ್ಟ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಬೇಕು, ಕೆಲವರು ಈ ಸಣ್ಣಪುಟ್ಟ ಜಾತಿಯವರನ್ನು ಪರಿಶಿಷ್ಟಜಾತಿಗೆ ಸೇರಿಸಬಾರದು ಎಂದು ಫೆಬ್ರವರಿ 15ರಂದು ತಹಸೀಲ್ದಾರ್ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿ ಗೊಂದಲ ಸೃಷ್ಟಿಸಿದ್ದರು. ಇವರ ವಿರುದ್ಧ ಕ್ರಮ ಕೈಗೊಳ್ಳಲು ತಾಲ್ಲೂಕು ದಲಿತ ಸಂಘಟನೆಗಳ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್  ಆಗ್ರಹಿಸಿದರು. ಈ ಜಾತಿಗಳಿಗೆ ಸೇರಿದ ಮಕ್ಕಳ ವಿದ್ಯಾಭ್ಯಾಸ ಹಾಗೂ ಸರ್ಕಾರಿ ನೌಕರಿಗೆ ತೊಂದರೆಯಾಗುತ್ತದೆಂದು ತಹಸೀಲ್ದಾರ್ ಸೋಮಶೇಖರಯ್ಯಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮೆಕಾನಿಕ್ ಶ್ರೀನಿವಾಸ್, ಕಾರ್ ಶ್ರೀನಿವಾಸ್, ಜಮ್ಮನಹಳ್ಳಿ ಕೃಷ್ಣ, ರಾಮಾಂಜಿ, ಕೀಲಾಗಾಣೆ ಶೇಶಪ್ಪ, ಅಂಗೊಂಡಹಳ್ಳಿ ವೆಂಕಟರಾಮಪ್ಪ, ವೀರಸಂದ್ರ ಅಗ್ರಹಾರ ರಾಮಸ್ವಾಮಿ ಭಾಗವಹಿಸಿದ್ದರು.
ಅಧಿಕಾರಿಗಳ ವಿರುದ್ಧ ಪ್ರತಿಭಟನೆಗೆ ನಿರ್ಧಾರ
ಚೆನ್ನದಾಸರ್, ಬುಡಗಜಂಗಮ ಹಾಗೂ ಇತರೆ ಜಾತಿಗಳಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಸೂಚಿಸಲಾಗಿದೆ. ಅದರೂ ತಾಲೂಕು ಕಚೇರಿಯಿಂದ ಜಾತಿ ಪತ್ರಗಳ ವಿತರಣೆಯಾಗುತ್ತಿದೆ.
ಇದನ್ನು ಪ್ರತಿಭಟಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಚೇರಿ ಮುಂದೆ 25ರಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ಹಮ್ಮಿಕೊಳ್ಳಲು ಕೋರಿ ತಹಸೀಲ್ದಾರ್ ಸೋಮಶೇಖರಯ್ಯನವರಿಗೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಸತೀಶ್, ಕರ್ನಾಟಕ ಹಿಂದುಳಿದ ವರ್ಗಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ವಿ.ಶ್ರೀನಾಥ್, ಆವಣಿ ಗೋಪಿ, ಕಸವುಗಾನಹಳ್ಳಿ ರಾಜು ಗಣೀಶಪಾಳ್ಯದ ಕೃಷ್ಣ ಮನವಿ ಸಲ್ಲಿಸಿದರು.
ತಹಸೀಲ್ದಾರ್ ಸ್ಪಷ್ಟನೆ: ಚೆನ್ನದಾಸರ್ ಜಾತಿ ಪ್ರಮಾಣ ಪತ್ರ ಹಿಂದೆ ನೀಡಲಾಗಿದ್ದು, ಅದರಂತೆ ಈಗಲೂ ಗ್ರೇಡ್ 2 ತಹಸೀಲ್ದಾರ್ ಜಾತಿ ಪತ್ರ ನೀಡಿದ್ದಾರೆ.
 ಈ ಬಗ್ಗೆ ಕೆಲವರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ. ಇದರಂತೆ ಸೋಮವಾರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಮಹಜರ್ ನಡೆಸಿ ದಾಖಲೆ ಸಂಗ್ರಹಿಸಿದ್ದಾರೆ.
 ಈ ಬಗ್ಗೆ ಮಾರ್ಗದರ್ಶನ ನೀಡಲು ಜಿಲ್ಲಾಧಿಕಾರಿಗಳಿಗೆ ಕಡತ ರವಾನಿಸಲಾಗಿದ್ದು ಅವರ ನೀಡುವ ಸೂಚನೆ ಪಾಲಿಸಲಾಗುವುದು ಎಂದು ತಹಸೀಲ್ದಾರ್ ಸೋಮಶೇಖರಯ್ಯ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement