ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನಪತ್ರಿಕೆ ವಿತರಣೆ
ಮುಳಬಾಗಲು: ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳ ಅಭ್ಯಾಸ ಮಾಡಿಸಿ ಅವರು ಉತ್ತಮ ಫಲಿತಾಂಶದೊಂದಿಗೆ ಉತೀರ್ಣಗೊಳಿಸಲು ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಸಹಕಾರ ನೀಡುವಂತೆ ಬಂಗಾರುಪೇಟೆ ಕನ್ನಡ ಸಂಘದ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಪಲ್ಲವಿ ಮಣಿ ಹೇಳಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ ಮುಳಬಾಗಲು ತಾಲೂಕು ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ 2 ಸೆಟ್ ಮಾದರಿ ಪ್ರಶ್ನಪತ್ರಿಕೆ ವಿತರಿಸಿ ಮಾತನಾಡಿ, ಈ ಪ್ರಶ್ನಪತ್ರಿಕೆ ನುರಿತ ಅಧ್ಯಾಪಕರಿಂದ ತಯಾರಿಸಿದ್ದು, ಹಿಂದಿನ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಶ್ನೆಗಳು ಈ ಪ್ರಶ್ನ ಪತ್ರಿಕೆಯಲ್ಲಿ ಬಂದಿದ್ದು ಈ ಸಾಲಿನಲ್ಲೂ ಬರುವ ಆಶಯವಿಟ್ಟುಕೊಳ್ಳಲಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ದೇವರಾಜ್ ಮಾತನಾಡಿ, ಮುಳಬಾಗಲು ತಾಲೂಕು ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು. ದೈಹಿಕ ಶಿಕ್ಷಕರಾದ ಇ. ಶ್ರೀನಿವಾಸಗೌಡ ಮಾತನಾಡಿದರು. ರಂಗರಾಮಯ್ಯ, ಎಂ. ಹೇಮಂತಕುಮಾರ್, ಶಿಕ್ಷಕ ಸಂಯೋಜಕ ಜಿ. ರವೀಂದ್ರಬಾಬು, ಶಿಕ್ಷಕರಾದ ಬಿ. ಚಲಪತಿ, ಸಿ. ಸುಬ್ರಮಣಿ, ವಿ. ರವೀಂದ್ರನಾಥಸಿಂಗ್, ಅನ್ವರ್ ಉಲ್ಲಾಹಸನ್, ವಿ. ರಂಗಸ್ವಾಮಿ, ನಂದಕುಮಾರ್, ಜಯವಂತಿ, ಶಿವಣ್ಣ ಇದ್ದರು.
ಹಣ ಬಿಡುಗಡೆಗಾಗಿ ಅಭಾವಿಪ ಪ್ರತಿಭಟನೆ
ಕ.ಪ್ರ. ವಾರ್ತೆ ತುಮಕೂರು ಫೆ.19
ಹಿಂದುಳಿದ ವರ್ಗಕ್ಕೆ ಸೇರಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ತಲುಪಬೇಕಾದ ಶುಲ್ಕವಿನಾಯಿತಿ ಮೊತ್ತ ಮೂರು ವರ್ಷಗಳಿಂದ ಬಾರದೆ ಇರುವುದನ್ನು ಖಂಡಿಸಿ ಅಭಾವಿಪ ತುಮಕೂರು ವಿವಿಧ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಹಿಂದುಳಿದ ವರ್ಗಗಳ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಹಕಾರ್ಯದರ್ಶಿ ಅಮರೇಶ್ ಮಾತನಾಡಿ ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿದ್ದು ಕಷ್ಟಕರ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.
ಈ ಕೂಡಲೆ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಎಚ್ಚತ್ತುಕೊಂಡು ಶುಲ್ಕ ವಿನಾಯಿತಿ ಹಣವನ್ನು ಬಿಡುಗಡೆ ಮಾಡಬೇಕಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ. ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷರಿಗೆ ಮನವಿ ಪತ್ರವನ್ನು ಸಲ್ಲಿಸಿದರು.