ಚಿನ್ನದ ಸರ ಕಳವು
ನಾಪತ್ತೆಯಾಗಿದ್ದು ದೂರು ನೀಡಲಾಗಿದೆ.
ಜೂಜಾಟ; ಇಬ್ಬರ ಬಂಧನ
ಮಾಲೂರು: ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ಒಂದು ಸಾವಿರ ನಗದು ಹಾಗೂ 8 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಹೂಸೂರು ರಸ್ತೆಯ ಸಂಪಂಗೆರೆಯಲ್ಲಿ ನಿತ್ಯ ಲಕ್ಷಾಂತರ ರು.ಗಳ ಜೂಜಾಟ ನಡೆಯುತ್ತಿರುವ ಮಾಹಿತಿ ಪಡೆದ ಜಿಲ್ಲಾ ವರಿಷ್ಠಾಧಿಕಾರಿ ರಾಮ್ ನಿವಾಸ್ ಸಪಟ್ ಅವರು ನೀಡಿದ ಮಾರ್ಗದರ್ಶನದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಇಲ್ಲಿನ ಇನ್ಸ್ಪೆಕ್ಟರ್ ಶಿವುಕುಮಾರ್ ಹಾಗೂ ಎಸ್ಐ ದಯಾನಂದ್ ನೇತೃತ್ವದಲ್ಲಿ ದಾಳಿ ನಡೆದಿದ್ದು ನಾಗಪ್ಪ ಹಾಗೂ ಚಂದ್ರಪ್ಪ ಎಂಬವರನ್ನು ಬಂಧಿಸಿ ಅವರ ಬಳಿ ಇದ್ದ ಸಾವಿರ ರು.ಗಳನ್ನು ಹಾಗೂ 8 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.